ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದ್ರೆ ಪಕ್ಷಕ್ಕೆ ವಾಪಸ್ಸು ಹೋಗೋಲ್ಲ: ಶಾಸಕ ಯತ್ನಾಳ್

ವಿಜಯಪುರ: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದ್ರೆ ಪಕ್ಷಕ್ಕೆ ವಾಪಸ್ಸು ಹೋಗೋಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿರಾಣಿ ಮನೆಯಲ್ಲಿನ ಮದುವೆ ಕಾರ್ಯ್ರಮ ಮತ್ತು ಬಿಎಸ್ ಯಡಿಯೂರಪ್ಪನವರ ಮೊಮ್ಮಗನ ಮದುವೆ-ಎರಡಕ್ಕೂ ತಾನು ಹೋಗಲಿಲ್ಲ,
ಒಮ್ಮೆ ಮನಸ್ಸು ಮುರಿದುಕೊಂಡ ಮೇಲೆ ಮುಗೀತು, ಪಕ್ಷಕ್ಕೆ ಯಾರು ರಾಜ್ಯಾಧ್ಯಕ್ಷರಾಗಬೇಕೆಂದು ತಾನು ಹೇಳೂದು ಇಲ್ಲ, ಒಂದು ವೇಳೆ ನಾನು ಹೇಳಿದ್ದೇಯಾದರೆ ಬಿಜೆಪಿ ನಾಯಕರು ಅವರನ್ನು ಟಾರ್ಗೆಟ್ ಮಾಡುತ್ತಾರೆ. ಅದಲ್ಲದೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದ್ರೆ ಪಕ್ಷಕ್ಕೆ ವಾಪಸ್ಸು ಹೋಗೋಲ್ಲ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






