Darshan: ವಿದೇಶಕ್ಕೆ ತೆರಳಲು ನಟ ದರ್ಶನ್’ಗೆ ಅನುಮತಿ ಕೊಟ್ಟ ನ್ಯಾಯಾಲಯ..!

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ವಿದೇಶಕ್ಕೆ ಹಾರಲು ನಟ ಸಿದ್ಧತೆ ಮಾಡಿಕೊಂಡಿದ್ದು, ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ದರ್ಶನ್ ಚಿತ್ರನಟ ಆಗಿದ್ದು,
ನಟನೆ ಅಷ್ಟೇ ಅವರ ದುಡಿಮೆ.ಹೀಗಾಗಿ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ದರ್ಶನ್ ಪರ ವಕೀಲರ ಮನವಿ ಮಾಡಿದ್ದರು. ಈ ಬಗ್ಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಎಲ್ಲಿಗೆ ಹೋಗ್ತಾರೆ ಎಂಬ ಸಂಪೂರ್ಣ ವಿವರಗಳಿಲ್ಲ.ವಿದೇಶದಲ್ಲಿ ಎಲ್ಲಿ ಉಳಿಯುತ್ತಾರೆ ಏನೂ ಗೊತ್ತಿಲ್ಲ ಎಂದು ನಿರಾಕರಣೆಗೆ ಎಸ್ ಪಿಪಿಯಿಂದ ಮನವಿಯಾಗಿತ್ತು.
ಇದೀಗ ನಟನಿಗೆ ವಿದೇಶಕ್ಕೆ ಹೋಗಲು 25 ದಿನಗಳ ಕಾಲ ಅನುಮತಿ ನೀಡಿದೆ ಕೋರ್ಟ್. ಜೂನ್ 1ರಿಂದ ಜೂನ್ 25ರವರೆಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಿದೆ. ಸಿನಿಮಾ ಶೂಟಿಂಗ್ ಹಿನ್ನೆಲೆ ದುಬೈ ಹಾಗೂ ಯೂರೋಪ್ ಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ರು ದರ್ಶನ್. ನ್ಯಾ. ಐ.ಪಿ ನಾಯ್ಕ್ ಅವರಿಂದ ಕೊನೆಗೂ ಆದೇಶ ಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?






