PM Kisan: ರೈತರಿಗೆ ಗುಡ್ ನ್ಯೂಸ್: ಈ ದಿನದಂದು ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 21ನೇ ಕಂತು!

ಅಕ್ಟೋಬರ್ 13, 2025 - 10:41
 0  20
PM Kisan: ರೈತರಿಗೆ ಗುಡ್ ನ್ಯೂಸ್: ಈ ದಿನದಂದು ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 21ನೇ ಕಂತು!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 21ನೇ ಕಂತಿನ ₹2,000 ಲಾಭಾಂಶಕ್ಕಾಗಿ ದೇಶದ ಲಕ್ಷಾಂತರ ರೈತರು ಕಾಯುತ್ತಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಮಾತ್ರ ಈ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇತ್ತೀಚಿನ ಪ್ರವಾಹದಿಂದಾಗಿ ಕೇಂದ್ರ ಸರ್ಕಾರವು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ರೈತರಿಗೆ ಮೊದಲಿಗೆ 21ನೇ ಕಂತು ಬಿಡುಗಡೆ ಮಾಡಿದೆ. ಈ ಮೂರು ರಾಜ್ಯಗಳಲ್ಲಿ ಸುಮಾರು 27 ಲಕ್ಷ ರೈತರು ಈ ಹಣವನ್ನು ಪಡೆದಿದ್ದಾರೆ.

ವರದಿಗಳ ಪ್ರಕಾರ, 21ನೇ ಕಂತಿನ ₹2,000 ಹಣವು ದೀಪಾವಳಿಗೆ ಮುನ್ನವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವ ಸಾಧ್ಯತೆಯಿದೆ. ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ರೈತರಿಗೆ ಹಣ ತಲುಪುವ ನಿರೀಕ್ಷೆಯಿದೆ. ಕೆ

ಲವು ರೈತರು ಈಗಾಗಲೇ ಈ ಕಂತಿನ ಹಣವನ್ನು ಸ್ವೀಕರಿಸಿದ್ದಾರೆ, ಮತ್ತು ಉಳಿದವರಿಗೆ ಮುಂದಿನ ದಿನಗಳಲ್ಲಿ ಹಣ ಜಮಾ ಆಗಲಿದೆ. ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವುದರ ಜೊತೆಗೆ, ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಪಾವತಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ನೀವು ನೊಂದಾವಣಿ ಮಾಡಿಸಿದರೂ ಹಣ ಸಿಕ್ಕಿಲ್ಲವಾ?

ಕೃಷಿ ಜಮೀನು ಇರುವ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲು ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ಒದಗಿಸುತ್ತದೆ. ನೀವು ಯೋಜನೆಗೆ ಅರ್ಹರಾಗಿದ್ದು, ನೊಂದಣಿ ಮಾಡಿಸಿದ್ದರೂ ಕೆಲ ಕಾರಣಕ್ಕೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಇರಬಹುದು. ಹಣ ಬರದೇ ಇರಲು ಕೆಲ ಕಾರಣಗಳು ಈ ಕೆಳಕಂಡಂತಿವೆ:

  1. ಇಕೆವೈಸಿ ಮಾಡಿಸಿಲ್ಲದಿರಬಹುದು, ಅಥವಾ ಅಪೂರ್ಣಗೊಂಡಿರಬಹುದು.
  2. ಯೋಜನೆಯ ಅರ್ಹತಾ ಮಾನದಂಡಗಳು ನಿಮಗೆ ಅನ್ವಯ ಆಗದೇ ಇರಬಹುದು
  3. ಬ್ಯಾಂಕ್ ಅಕೌಂಟ್ ಸಂಖ್ಯೆ ತಪ್ಪಾಗಿ ನಮೂದಿಸಿರಬಹುದು. ಐಎಫ್​ಎಸ್​ಸಿ ಕೋಡ್ ತಪ್ಪಾಗಿರಬಹುದು.
  4. ಅರ್ಜಿಯಲ್ಲಿ ಕಡ್ಡಾಯವಾಗಿ ತುಂಬಿಸಬೇಕಾದ ಕಡೆ ಮಾಹಿತಿ ಇಲ್ಲದೇ ಇರಬಹುದು.
  5. ಬ್ಯಾಂಕ್ ಹೆಸರು ಅಥವಾ ಅಂಚೆ ಕಚೇರಿ ಹೆಸರು ಸರಿ ಇಲ್ಲದೇ ಇರಬಹುದು.
  6. ಆಧಾರ್ ಮತ್ತು ಅಕೌಂಟ್ ಎರಡೂ ಅಸಿಂಧು ಇರಬಹುದು.
  7. ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಂಡಿರಬಹುದು.

ಪಿಎಂ ಕಿಸಾನ್, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ…

ಪಿಎಂ ಕಿಸಾನ್ ಯೋಜನೆಗೆ ನೀವು ನೊಂದಾಯಿಸಿದ್ದರೆ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡುವುದು ಸುಲಭ. ಈ ಮುಂದಿನ ಕ್ರಮಗಳನ್ನು ಅನುಸರಿಸಿ.

  • ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ಗೆ ಭೇಟಿ ನೀಡಿ:gov.in/
  • ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ.
  • ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮದ ಹೆಸರನ್ನು ಆಯ್ದುಕೊಳ್ಳಿ.
  • ಬಳಿಕ ‘ಗೆಟ್ ರಿಪೋರ್ಟ್’ ಅನ್ನು ಕ್ಲಿಕ್ ಮಾಡಿ.

ಇಲ್ಲಿ ಪಿಎಂ ಕಿಸಾನ್ ಯೋಜನೆ ಅಡಿ ಆ ಗ್ರಾಮದಲ್ಲಿ ಇರುವ ಎಲ್ಲಾ ಫಲಾನುಭವಗಳ ಪಟ್ಟಿಯನ್ನು ಕಾಣಬಹುದು. ಅದರಲ್ಲಿ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಿ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow