2025ರ ಈ ವರ್ಷದಲ್ಲಿ ಬರುವ ಹುಣ್ಣಿಮೆ, ಅಮಾವಾಸ್ಯೆಗಳ ಪಟ್ಟಿ: ದಿನಾಂಕ, ವಾರಗಳ ಸಂಪೂರ್ಣ ವಿವರ ಇಲ್ಲಿದೆ!

ಜನವರಿ 11, 2025 - 07:00
 0  58
2025ರ ಈ ವರ್ಷದಲ್ಲಿ ಬರುವ ಹುಣ್ಣಿಮೆ, ಅಮಾವಾಸ್ಯೆಗಳ ಪಟ್ಟಿ: ದಿನಾಂಕ, ವಾರಗಳ ಸಂಪೂರ್ಣ ವಿವರ ಇಲ್ಲಿದೆ!

ಹಿಂದೂ ಧರ್ಮದಲ್ಲಿ ಪೂರ್ಣಿಮಾ ಅಥವಾ ಹುಣ್ಣಿಮೆಯನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಗವಾನ್ ವಿಷ್ಣುವಿನ ಆರಾಧನೆಗೆ ಮೀಸಲಾಗಿದೆ. ಜನರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಭಗವಾನ್ ವಿಷ್ಣುವಿಗೆ ಬಹಳ ಭಕ್ತಿ ಮತ್ತು ಸಮರ್ಪಣೆಯಿಂದ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ದಿನ ಸಾಕಷ್ಟು ಜನರು ಸತ್ಯನಾರಾಯಣ ಪೂಜೆಯನ್ನು ಕೂಡ ನಡೆಸುತ್ತಾರೆ. ಹುಣ್ಣಿಮೆ ದಿನವನ್ನು ಪೌರ್ಣಮಿ ಅಥವಾ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಅದರಂತೆ ಅಮಾವಾಸ್ಯೆ ಕೂಡ ಬರುತ್ತದೆ. 

ಹುಣ್ಣಿಮೆ ದಿನದಂದು ಜನರು ಸತ್ಯನಾರಾಯಣ ಪೂಜೆ, ಲಕ್ಷ್ಮಿ ಪೂಜೆಗಳಂತಹ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಅಮಾವಾಸ್ಯೆಯಂದು ಪವಿತ್ರ ನದಿ ಸ್ನಾನ, ಪಿತೃ ತರ್ಪಣ ಸೇರಿದಂತೆ ತಮ್ಮ ಪಿತೃಗಳನ್ನು ಸ್ಮರಿಸುತ್ತಾರೆ. 2024ರ ವರ್ಷ ಮುಗಿದು 2025ರ ಹೊಸ ವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ನಮಗೆ ಯಾವೆಲ್ಲಾ ದಿನ ಹುಣ್ಣಿಮೆ ಮತ್ತು ಪೂರ್ಣಿಮಾ ತಿಥಿ ಸಿಗುತ್ತದೆ ಎಂದು ತಿಳಿಯಿರಿ.

2025ರಲ್ಲಿ ಬಂದಿರುವ ಪೂರ್ಣಿಮಾ ಮತ್ತು ಅಮಾವಾಸ್ಯೆ ದಿನಾಂಕಗಳು:

ತಿಂಗಳು    ದಿನಾಂಕ    ಪೂರ್ಣಿಮಾ    ಅಮಾವಾಸ್ಯೆ
ಜನವರಿ 2025    ಜನವರಿ 13, ಸೋಮವಾರ    ಬನದ ಹುಣ್ಣಿಮೆ    ------------------------

ಜನವರಿ 29, ಬುಧವಾರ    ---------------------    ಪುಷ್ಯ ಅಮಾವಾಸ್ಯೆ

ಫೆಬ್ರವರಿ 2025    ಫೆಬ್ರವರಿ 12, ಬುಧವಾರ    ಮಾಘ ಹುಣ್ಣಿಮೆ    ---------

ಫೆಬ್ರವರಿ 28, ಶುಕ್ರವಾರ    ---------    ಮಾಘ ಅಮಾವಾಸ್ಯೆ

ಮಾರ್ಚ್‌ 2025    ಮಾರ್ಚ್‌ 14, ಶುಕ್ರವಾರ    ಹೋಳಿ ಹುಣ್ಣಿಮೆ    ---------

ಮಾರ್ಚ್‌ 29, ಶನಿವಾರ    ---------    ದರ್ಶ ಅಮಾವಾಸ್ಯೆ

ಏಪ್ರಿಲ್‌ 2025    ಏಪ್ರಿಲ್‌, 12, ಶನಿವಾರ    ದವನದ ಹುಣ್ಣಿಮೆ    ---------
ಏಪ್ರಿಲ್‌ 27, ಭಾನುವಾರ    ---------    ಚೈತ್ರ ಅಮಾವಾಸ್ಯೆ

ಮೇ 2025    ಮೇ 12, ಸೋಮವಾರ    ಬುದ್ಧ ಹುಣ್ಣಿಮೆ    ---------
ಮೇ 27, ಮಂಗಳವಾರ    ---------    ವೈಶಾಖ ಅಮಾವಾಸ್ಯೆ

ಜೂನ್‌ 2025    ಜೂನ್‌ 11, ಬುಧವಾರ    ಕಾರ ಹುಣ್ಣಿಮೆ    ---------
ಜೂನ್‌ 25, ಬುಧವಾರ    ---------    ಮಣ್ಣೆತ್ತಿನ ಅಮಾವಾಸ್ಯೆ

ಜುಲೈ 2025    ಜುಲೈ, 10, ಗುರುವಾರ    ಗುರು ಪೂರ್ಣಿಮೆ    ---------
ಜುಲೈ 24, ಗುರುವಾರ    ---------    ಆಷಾಢ / ಆಟಿ ಅಮಾವಾಸ್ಯೆ

ಆಗಸ್ಟ್‌ 2025    ಆಗಸ್ಟ್‌ 9, ಶನಿವಾರ    ನೂಲು ಹುಣ್ಣಿಮೆ    ---------
ಆಗಸ್ಟ್‌ 23, ಶನಿವಾರ    ---------    ಬೆನಕನ ಅಮಾವಾಸ್ಯೆ

ಸೆಪ್ಟೆಂಬರ್‌ 2025    ಸೆಪ್ಟೆಂಬರ್‌ 7, ಭಾನುವಾರ    ಅನಂತ ಹುಣ್ಣಿಮೆ    ---------
ಸೆಪ್ಟೆಂಬರ್ 21, ಭಾನುವಾರ    ---------    ಮಹಾಲಯ ಅಮಾವಾಸ್ಯೆ

ಅಕ್ಟೋಬರ್‌ 2025    ಅಕ್ಟೋಬರ್ 7, ಮಂಗಳವಾರ    ಶೀಗಿ ಹುಣ್ಣಿಮೆ    ---------
ಅಕ್ಟೋಬರ್‌ 21, ಮಂಗಳವಾರ    ---------    ದೀಪಾವಳಿ ಅಮಾವಾಸ್ಯೆ

ನವೆಂಬರ್‌ 2025    ನವೆಂಬರ್‌ 5, ಬುಧವಾರ    ಗೌರಿ ಹುಣ್ಣಿಮೆ    ---------
ನವೆಂಬರ್‌ 20, ಗುರುವಾರ    ---------    ಛಟ್ಟಿ ಅಮಾವಾಸ್ಯೆ

ಡಿಸೆಂಬರ್‌ 2025    ಡಿಸೆಂಬರ್‌ 4, ಗುರುವಾರ    ಹೊಸ್ತಿಲ ಹುಣ್ಣಿಮೆ    ---------
ಡಿಸೆಂಬರ್‌ 19, ಶುಕ್ರವಾರ    ---------    ಎಳ್ಳ ಅಮಾವಾಸ್ಯೆ

ಈ ಎಲ್ಲಾ ಅಮಾವಾಸ್ಯೆ ಮತ್ತು ಪೂರ್ಣಿಮಾವನ್ನು ನಾವು 2025ರ ವರ್ಷದಲ್ಲಿ ಆಚರಿಸಲಾಗುವುದು. ಆಯಾ ಮಾಸಕ್ಕೆ ಅನುಗುಣವಾಗಿ ಪ್ರತಿಯೊಂದು ಪೂರ್ಣಿಮಾ ಮತ್ತು ಅಮಾವಾಸ್ಯೆಗೆ ಹೆಸರನ್ನು ನೀಡಲಾಗಿದ್ದು, ಅದಕ್ಕೆ ತಕ್ಕೆಂತೆ ಅವುಗಳ ಮಹತ್ವ ಮತ್ತು ಆಚರಣೆಯ ವಿಧಾನಗಳು ಕೂಡ ಭಿನ್ನವಾಗಿರುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow