ಈರುಳ್ಳಿ ಬೆಲೆ ಕುಸಿತ: ಕಣ್ಣೀರಲ್ಲಿ “ಅನ್ನದಾತ”! ಬೆಂಬಲ ಬೆಲೆ ನೀಡುವಂತೆ ಆಗ್ರಹ
ಬಳ್ಳಾರಿ:- ಈರುಳ್ಳಿ ಬೆಲೆ ಭಾರೀ ಕುಸಿತ ಹಿನ್ನೆಲೆ ರೈತರು ಕಂಗಾಲು ಆಗಿದ್ದಾರೆ. ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಸರಿಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆಯನ್ನು ಬೆಳೆದಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಒಳ್ಳೆಯ ಇಳುವರಿ ಸಹ ಬಂದಿದೆ. ಲಕ್ಷಾಂತರ ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರು ಈ ವರ್ಷ ಬಂಪರ್ ಬೆಳೆ ಬೆಳೆದು ಸಾಲ ತೀರಿಸಿದರಾಯಿತು ಎಂದು ಯೋಚನೆ ಮಾಡಿದ್ದರು. ಆದರೆ ಈರುಳ್ಳಿ ದರ ಕುಸಿತದಿಂದ ರೈತ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.
ಸಿರಗುಪ್ಪ ತಾಲೂಕಿನ ದಾಸಾಪುರ ಗ್ರಾಮದಲ್ಲಿ ರೈತ ಬಸಪ್ಪ ಈ ವರ್ಷ ನಾಲ್ಕು ಎಕರೆ ಈರುಳ್ಳಿ ಬೆಳೆದಿದ್ದರು. ಒಂದು ಎಕರೆಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರಿಂದ ಇಳುವರಿಯನೋ ಪರವಾಗಿಲ್ಲ . ಎಕರೆಗೆ ಕನಿಷ್ಠ 60 ಚೀಲವಾದರೂ ಬರುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆದರೆ ದರ ಮಾತ್ರ ಒಂದು ಕೆಜಿ ಗೆ 5 ರೂ ಇದೆ. ಹೀಗಾಗಿ ಹಾಕಿರುವ ಬಂಡವಾಳ ಸಹ ಬರವುದಿಲ್ಲ, ಏನು ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಬೆಂಬಲ ಬೆಲೆಯೊಂದಿಗೆ ಈರುಳ್ಳಿ ಖರೀದಿ ಮಾಡಬೇಕು. ಕನಿಷ್ಠ ಒಂದು ಕೆಜಿ ಈರುಳ್ಳಿಗೆ 30 ರಿಂದ 35 ರೂ ಕೊಟ್ಟು ಈರುಳ್ಳಿ ಖರೀದಿ ಮಾಡಬೇಕು. ಹಾಗಾದರೆ ಮಾತ್ರ ರೈತ ಉಳಿಯುತ್ತಾನೆ. ಇಲ್ಲವಾದ್ರೆ ರೈತ ಬದುಕುವುದು ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?