ಬಸವಣ್ಣನನ್ನು ರಾಜಕೀಯ ವಸ್ತುವಾಗಿ ಬಳಕೆ ಮಾಡುತ್ತಿರುವುದು ದುಃಖದ ಸಂಗತಿ: ಬೊಮ್ಮಾಯಿ

ಅಕ್ಟೋಬರ್ 31, 2025 - 16:08
 0  7
ಬಸವಣ್ಣನನ್ನು ರಾಜಕೀಯ ವಸ್ತುವಾಗಿ ಬಳಕೆ ಮಾಡುತ್ತಿರುವುದು ದುಃಖದ ಸಂಗತಿ: ಬೊಮ್ಮಾಯಿ
ಬೆಂಗಳೂರು: ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹೊರಗಡೆಯಿಂದ ಸವಾಲಿದೆ. ಕನ್ನಡದ ಮೇಲೆ ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ. ಅವರೆಲ್ಲರನ್ನು ಸರಿಪಡಿಸಿಕೊಂಡು ಕನ್ನಡವನ್ನು ಮೇಲೆತ್ತುವ ಕೆಲಸ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ. ಬಸವರಾಜ ಬೊಮ್ಮಾಯಿ ಹೇಳಿದರು.
 ಅವರು ಇಂದು ಡಾ. ಸಿ.‌ಸೋಮಶೇಖರ ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಜೀವಮಾನ ಸಾಧನೆಗಾಗಿ ಹಿರಿಯ ಸಾಧಕರಿಗೆ ಸಂಸ್ಕೃತಿ ಸಂಗಮ 2025 ಪ್ರಶಸ್ತಿ ಪ್ರದಾನ  ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಸೋಮಶೇಖರ್ ಅವರ ಕಾರ್ಯಕ್ರಮದಲ್ಲಿ ಮಾತು ಕೇಳಬೇಕು. ಮಾತನಾಡುವುದು ಎಐ ಮೂಲಕವೂ ನಡೆಯುತ್ತದೆ. ಮಾತಿಗೆ ಬೆಲೆ ಬರಬೇಕು. ಮಾತಿನಂತೆ ನಡೆಯುವ ಶಕ್ತಿ ನಾವೆ ಪಡೆಯಬೇಕು.
ಎಲ್ಲ ಅವಕಾಶ ಭಗವಂತ ಕೊಟ್ಟಿದ್ದಾನೆ. ನಾವು ಮಾತಿನಂತೆ ನಡೆದಿದ್ದೇವೊ ಇಲ್ಲವೋ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ನಿರಂತರವಾಗಿ ನಮ್ಮೊಡನೆ ಮಾತನಾಡುತ್ತಿರುತ್ತೇವೆ. ನಮ್ಮ ಆತ್ಮೀಯ ಸ್ನೇಹಿತ ಅಂದರೆ ನಮಗೆ ನಾವೇ ಇನ್ನೊಬ್ಬನಿಗೆ ಸುಳ್ಳು ಹೇಳಬೆಕೆಂದರೆ ನಮ್ಮೊಳಗೆ ಹೇಳುತ್ತೇವೆ. ನಮ್ಮ ನೆರಳಿಗೆ ಹೆದರಿ ನಡೆಯುವುದು ನಮ್ಮ ಸಂಸ್ಕೃತಿ. ಸಂಸ್ಕೃತಿಯ ಬಗ್ಗೆ ಬಹಳ ಚರ್ಚೆಯಾಗಿದೆ. ಅವೆಲ್ಲವೂ ಮಾನವೀಯ ಸಂಸ್ಕೃತಿಯಿಂದ ಹೊರ ಬಂದಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಮತ್ತು ನಾಗರಿಕತೆಯ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಒಬ್ಬ ಶ್ರೀಮಂತ ನನ್ನು ದೊಡ್ಡ ಸುಸಂಸ್ಕೃತ ಅಂತ ಹೊಗಳುತ್ತೇವೆ. ಆತನನ್ನು ಹತ್ತಿರದಿಂದ ನೋಡಿದಾಗ ಗೊತ್ತಾಗುತ್ತದೆ. ನಾಗರಿಕತೆ ಅಂದರೆ ಸೈಕಲ್ ಇತ್ತು, ಬೈಕ್, ಬಸ್ ಬಂತು, ಈಗ ವಿಮಾನ ಬಂದಿದೆ‌ ನಗರಗಳು ಬೆಳೆದಿವೆ. ನಮ್ಮ ಬಳಿ ಏನಿದೆ ಅದು ನಾಗರಿಕತೆ ನಾವು ಏನಾಗಿದ್ದೇವೆ ಅದು ಸಂಸ್ಕೃತಿ. ನಮ್ಮ ಬಳಿ ಏನೇ ಶ್ರೀಮಂತಿಕೆ ಬಂದರೂ ಎಷ್ಟು ಉಸಿರಾಡುತ್ತೇವೊ ಅಷ್ಟೇ ಉಸಿರಾಡುತ್ತೇವೆ. ಗಾಳಿ, ಬೆಳಕು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳಿದರು.
 
ಸುಸಂಸ್ಕೃತರಿಗೆ ಪ್ರಶಸ್ತಿ
ನಮ್ಮ ಕನ್ನಡದಲ್ಲಿ ಸಂಸ್ಕೃತಿಯನ್ನು ಯಾವ ರೀತಿ ಅರ್ಥೈಸಿದ್ದೇವೆ ಅದು ನಮ್ಮ ಸಂಸ್ಕೃತಿ ನಮ್ಮ ಸೊಮಶೇಖರ ಅವರು ಜ್ಞಾನದ ಸಂಸ್ಕೃತಿ ಹೊಂದಿರುವವರಿಗೆ ಪ್ರಶಸ್ತಿ ನೀಡುತ್ತ ಬಂದಿದ್ದಾರೆ. ಅವರು ಹಲವಾರು ಪುಸ್ತಕ ಬರೆದಿದ್ದಾರೆ. ಅಧಿಕಾರಿಯಾಗಿ ಕನ್ನಡಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅನೇಕ ಅಧಿಕಾರಿಗಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದನ್ನು ಅಧಿಕಾರ ಓವರ್ ಟೇಕ್ ಮಾಡಿದಾಗ ಪ್ರತಿಭೆ ಗೌಣವಾಗುತ್ತದೆ. ಸೋಮಶೇಖರ್ ಅವರಲ್ಲಿ ಪ್ರತಿಭೆ ಕಡಿಮೆಯಾಗಿಲ್ಲ.
ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವುದು ಸಮತೋಷದ ಸುದ್ದಿ, ಸಾಹಿತ್ಯ ಅಂದರೆ ರಾಜಕೀಯ, ಮನಷ್ಯ ರಾಜಕೀಯ ಜೀವಿ ಪ್ರತಿಯೊಬ್ಬರ ಮನೆಯಲ್ಲಿಯೂ ರಾಜಕೀಯ ಇದೆ‌.  ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹೊರಗಡೆಯಿಂದ ಸವಾಲಿದೆ. ಕನ್ನಡದ ಮೇಲೆ ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ. ಅವರೆಲ್ಲರನ್ನು ಸರಿಪಡಿಸಿಕೊಂಡು ಮೇಲೆತ್ತುವ ಕೆಲಸ ಆಗಬೇಕಿದೆ. ಕನ್ನಡಕ್ಕೆ ಯಾವುದೆ ಕುತ್ತಿಲ್ಲ. ಕನ್ನಡ ಯಾವತ್ತೂ ನಶಿಸಲು ಸಾಧ್ಯವಿಲ್ಲ  ಎಂದರು.
 
ಜಂಟಿ ಕಾರ್ಯ ಅಗತ್ಯ
ಜಾನಪದ ಲೋಕದ ಎಚ್. ಎಲ್. ನಾಗೇಗೌಡರು ನಮಗೆ ಪರಿಚಿತರು. ಅವರ ಪ್ರೇರಣೆಯಿಂದ ಶಿಗ್ಗಾವಿಯಲ್ಲಿ ಜಾನಪದ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿದ್ದೇವೆ. ಜಾನಪದ ಲೋಕ ಮತ್ತು ಜಾನಪದ ವಿಶ್ವ ವಿದ್ಯಾಲಯ ಜಂಟಿಯಾಗಿ ಕಾರ್ಯ ನಿರ್ವಹಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಕಪ್ಪಣ್ಣ, ಕಾ.ತ ಚಿಕ್ಕಣ್ಸ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕಸ್ತೂರಿ ಶಂಕರ ಅವರು ನಮ್ಮ ಮನದಾಳದಲ್ಲಿದ್ಸಾರೆ‌ ಅವರ ಹಾಡುಗಳು ಪ್ರತಿ ದಿನ ಕೇಳುತ್ತೇವೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow