ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಹಳದಿ ಮಾರ್ಗದಲ್ಲಿ ಇನ್ಮುಂದೆ ಪ್ರತಿ 15 ನಿಮಿಷಕ್ಕೊಂದು ರೈಲು

ನವೆಂಬರ್ 1, 2025 - 16:07
 0  9
ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಹಳದಿ ಮಾರ್ಗದಲ್ಲಿ ಇನ್ಮುಂದೆ ಪ್ರತಿ 15 ನಿಮಿಷಕ್ಕೊಂದು ರೈಲು

ಬೆಂಗಳೂರು : ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್‌ನ್ಯೂಸ್ ನೀಡಿದ್ದು, ಇಂದಿನಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ಸೇವೆ ಆರಂಭಿಸಿದೆ. ಹೊಸ ರೈಲು ಸಂಚಾರದಿಂದ ಪ್ರಯಾಣಿಕರ ಕಾಯುವಿಕೆ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಈ ಮೂಲಕ ಪೀಕ್ ಅವರ್‌ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು BMRCL ಮಾಹಿತಿ ನೀಡಿದೆ.

ಆರ್.ವಿ.ರೋಡ್ ಮತ್ತು ಬೊಮ್ಮಸಂದ್ರ ಕಡೆ ತೆರಳುವ ಮೆಟ್ರೋ ರೈಲು ಇದಾಗಿದೆ. ಈ ಮೊದಲು ನಾಲ್ಕು ರೈಲು ಸೇವೆ ಇತ್ತು. ಇಂದಿನಿಂದ ಐದು ಮೆಟ್ರೋ ಸೇವೆ ಯೆಲ್ಲೋ ಲೈನ್‌ನಲ್ಲಿ (Yellow Line) ಲಭ್ಯವಿರಲಿದೆ. ಯೆಲ್ಲೋ ಲೈನ್‌ನಲ್ಲಿ ಪೀಕ್ ಅವರ್‌ನಲ್ಲಿ ರೈಲುಗಳು ಪ್ರತಿ 15 ನಿಮಿಷಕ್ಕೊಮ್ಮೆ ಸಂಚರಿಸಲಿವೆ.

ಹಿಂದಿನಂತೆ 19 ನಿಮಿಷಗಳ ಬದಲು ಈಗ 15 ನಿಮಿಷಕ್ಕೆ ಮೆಟ್ರೋ ಸೇವೆ ಇರಲಿದೆ. ಈ ಬದಲಾವಣೆ ಎಲ್ಲ ದಿನಗಳಿಗೂ ಅನ್ವಯವಾಗಲಿದೆ. ಮೊದಲ ಹಾಗೂ ಕೊನೆಯ ರೈಲು ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದರಿಂದ ಪ್ರಯಾಣಿಕರಿಗೆ ಸುಗಮ ಹಾಗೂ ಸುಧಾರಿತ ಮೆಟ್ರೋ ಸೇವೆ ಸಿಕ್ಕಂತಾಗಿದೆ. ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರ ಕಾಯುವಿಕೆ ಇನ್ನಷ್ಟು ತಗ್ಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow