DCC ಬ್ಯಾಂಕ್ ಚುನಾವಣೆ ಫಲಿತಾಂಶ ಬಳಿಕ ಹೃದಯಾಘಾತದಿಂದ ಪಿಕೆಪಿಎಸ್ ಸದಸ್ಯ ನಿಧನ

ಅಕ್ಟೋಬರ್ 20, 2025 - 20:10
 0  18
DCC ಬ್ಯಾಂಕ್ ಚುನಾವಣೆ ಫಲಿತಾಂಶ ಬಳಿಕ ಹೃದಯಾಘಾತದಿಂದ ಪಿಕೆಪಿಎಸ್ ಸದಸ್ಯ ನಿಧನ

ಬೆಳಗಾವಿ: ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಮಲ್ಲಣ್ಣ ಯಾದವಾಡ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆ ವೇಳೆ ಶಾಸಕ ಅಶೋಕ ಪಟ್ಟಣ ಅವರ ಬೆಂಬಲ ಲಭ್ಯವಾಗಿತ್ತು. ಆದರೆ, ಗೆಲುವಿನ ಸಂಭ್ರಮಾಚರಣೆ ನಂತರ ಪಿಕೆಪಿಎಸ್ ಮಾಜಿ ಅಧ್ಯಕ್ಷ ಗಿರಿಯಪ್ಪ ಗಂಟೋಟಿ (40) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗಿರಿಯಪ್ಪ ಗಂಟೋಟಿ ರಾಮದುರ್ಗ ತಾಲೂಕು, ಕಮಕೇರಿ ನಿವಾಸಿಯಾಗಿದ್ದು, ಮಲ್ಲಣ್ಣ ಯಾದವಾಡ ಪರ ಪ್ರಚಾರ ಕಾರ್ಯದಲ್ಲಿ ಶಾಸಕ ಅಶೋಕ ಪಟ್ಟಣ ಅವರ ಜೊತೆ ಸೇರಿದ್ದರು.

ನಿನ್ನೆ ನಡೆದ ಚುನಾವಣೆಯಲ್ಲಿ ಮಲ್ಲಣ್ಣ ಯಾದವಾಡ ಜಯ ಸಾಧಿಸಿದ್ದ ಸಂದರ್ಭದಲ್ಲಿ ವಿಜಯೋತ್ಸವದಲ್ಲಿ ಗಿರಿಯಪ್ಪ ಭಾಗವಹಿಸಿದ್ದರು. ಆದರೆ, ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಮದುರ್ಗ ಮತ್ತು ಬೆಳಗಾವಿಯಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ಚುನಾವಣೆ ಗೆಲುವಿನ ಸಂಭ್ರಮದಲ್ಲಿದ್ದವರಿಗೆ ಇದು ಕಂಬನಿ ಮಿಡಿಯುವಂತೆ ಮಾಡಿದೆ.

ಭಾನುವಾರ 7 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 3 ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ. ಇನ್ನುಳಿದ 4 ತಾಲೂಕುಗಳ ಕೆಲವೊಂದು ಮತಗಳು ನ್ಯಾಯಾಲಯದಲ್ಲಿ ಇರುವ ಹಿನ್ನೆಲೆ ಅ.28ರಂದು ಫಲಿತಾಂಶ ಪ್ರಕಟ ಆಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow