ಅಘ್ಘಾನ್ ವಿರುದ್ಧ ತ್ರಿಕೋನ ಸರಣಿಗೆ ಸಜ್ಜಾದ ಭಾರತ ಅಂಡರ್-19 ತಂಡ! ವೇಳಾಪಟ್ಟಿ ಪ್ರಕಟ

ಅಕ್ಟೋಬರ್ 21, 2025 - 09:23
 0  17
ಅಘ್ಘಾನ್ ವಿರುದ್ಧ ತ್ರಿಕೋನ ಸರಣಿಗೆ ಸಜ್ಜಾದ ಭಾರತ ಅಂಡರ್-19 ತಂಡ! ವೇಳಾಪಟ್ಟಿ ಪ್ರಕಟ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ಅಂಡರ್-19 (India U19) ತಂಡ ಇದೀಗ ಅಫ್ಘಾನಿಸ್ತಾನ ಅಂಡರ್-19 (Afghanistan U19) ತಂಡದ ಸವಾಲು ಎದುರಿಸಲು ಸಜ್ಜಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಭಾರತದಲ್ಲಿ ತ್ರಿಕೋನ ಯುವ ಏಕದಿನ ಸರಣಿ ನಡೆಯಲಿದೆ.

ಸರಣಿಯಲ್ಲಿ ಭಾರತ ಅಂಡರ್-19 , ಭಾರತ ಅಂಡರ್-19 ಬಿ, ಮತ್ತು ಅಫ್ಘಾನಿಸ್ತಾನ ಅಂಡರ್-19 ತಂಡಗಳು ಭಾಗವಹಿಸಲಿವೆ. ಅಂದರೆ, ಭಾರತದಿಂದ ಎರಡು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಯುವ ಪ್ರತಿಭಾವಂತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಂಡಗಳಲ್ಲಿ ಒಂದರಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಪ್ರಕಟಣೆಯ ಪ್ರಕಾರ, ತ್ರಿಕೋನ ಸರಣಿಯು ಡಬಲ್ ರೌಂಡ್-ರಾಬಿನ್ ಸ್ವರೂಪದಲ್ಲಿ ನಡೆಯಲಿದೆಅಂದರೆ, ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಆಡುತ್ತದೆ. ನಂತರ ಅಗ್ರ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಬೆಂಗಳೂರು ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿವೆ.

ಸರಣಿಯ ವೇಳಾಪಟ್ಟಿ:

 ನವೆಂಬರ್ 17: ಭಾರತ vs ಭಾರತ ಬಿ

 ನವೆಂಬರ್ 19: ಭಾರತ ಬಿ vs ಅಫ್ಘಾನಿಸ್ತಾನ

 ನವೆಂಬರ್ 21: ಭಾರತ vs ಅಫ್ಘಾನಿಸ್ತಾನ

 ನವೆಂಬರ್ 23: ಭಾರತ vs ಭಾರತ ಬಿ

 ನವೆಂಬರ್ 25: ಭಾರತ ಬಿ vs ಅಫ್ಘಾನಿಸ್ತಾನ

 ನವೆಂಬರ್ 27: ಭಾರತ vs ಅಫ್ಘಾನಿಸ್ತಾನ

 ನವೆಂಬರ್ 30: ಫೈನಲ್ ಪಂದ್ಯ

 ಸರಣಿ ಅಂಡರ್-19 ವಿಶ್ವಕಪ್ಗೆ ತಯಾರಿಯ ಭಾಗವಾಗಿದ್ದು, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ನಸೀಬ್ ಖಾನ್ ಅವರು ಹೇಳಿದರು̤. ಸಿಸಿ ಪುರುಷರ ಅಂಡರ್-19 ಕ್ರಿಕೆಟ್ ವಿಶ್ವಕಪ್ ಸಮೀಪಿಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ನಮ್ಮ ತಂಡದ ಸಿದ್ಧತೆ ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಐದು ಪಂದ್ಯಗಳ ಸರಣಿ ಹಾಗೂ ಈಗ ಭಾರತದಲ್ಲಿನ ತ್ರಿಕೋನ ಸರಣಿ ನಮ್ಮ ಆಟಗಾರರಿಗೆ ಅಮೂಲ್ಯ ಅನುಭವ ನೀಡಲಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow