14ರ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಕಿರಿಯ ಕ್ಯೋಟ್ಯಾಧಿಪತಿ! IPLನಿಂದ 40 ಪಟ್ಟು ಆದಾಯ ಹೆಚ್ಚಳ!

ಜುಲೈ 21, 2025 - 09:08
 0  13
14ರ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಕಿರಿಯ ಕ್ಯೋಟ್ಯಾಧಿಪತಿ! IPLನಿಂದ 40 ಪಟ್ಟು ಆದಾಯ ಹೆಚ್ಚಳ!

ಇಂಗ್ಲೆಂಡ್: ಭಾರತ ಅಂಡರ್–19 ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಈಗಾಗಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ cricket ಲೋಕದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಇಂಗ್ಲೆಂಡ್ಪ್ರವಾಸದಲ್ಲಿಯೇ ಅಲ್ಲದೆ, ಐಪಿಎಲ್ 2025 ಪ್ರದರ್ಶನದಿಂದಾಗಿ ವೈಭವ್ ಸೂರ್ಯವಂಶಿ ಹೆಸರು ಪ್ರತಿಷ್ಠಿತವಾಗಿ ಬೆಳೆಯುತ್ತಿದೆ.

ಐಪಿಎಲ್ ಮೆಗಾ ಹರಾಜಿನಲ್ಲಿ 1 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾದ ವೈಭವ್, ತಮ್ಮ ಅತಿದೊಡ್ಡ ಚೇತನತೆಯಿಂದ ನೆಟ್ಟಿಗರ ಮತ್ತು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. reports ಪ್ರಕಾರ, 2024ರಿನಲ್ಲಿ ಕೇವಲ ₹5 ಲಕ್ಷ ರೂಪಾಯಿ ಇದ್ದ ವೈಭವ್ ಅವರ ನಿವ್ವಳ ಮೌಲ್ಯ, 2025 ಐಪಿಎಲ್ ನಂತರ ₹2 ಕೋಟಿ ರೂಪಾಯಿಗೆ ತಲುಪಿದೆ. ಇದರಿಂದಾಗಿ ಒಂದು ವರ್ಷದಲ್ಲಿ ಅವರ ಆದಾಯ ಶತಮಾನ ಪ್ರಮಾಣದಲ್ಲಿಅಂದರೆ 40 ಪಟ್ಟುವೃದ್ಧಿಯಾಗಿದೆ.

ಅವರು ಹೊಂದಿರುವ ಆದಾಯದ ಪ್ರಮುಖ ಮೂಲಗಳಲ್ಲಿ:

ಐಪಿಎಲ್ ಪಂದ್ಯ ಶುಲ್ಕ

ದೇಶೀಯ ಕ್ರಿಕೆಟ್ಪಂದ್ಯಗಳು

ಬ್ರ್ಯಾಂಡ್ ಜಾಹೀರಾತುಗಳು ಸೇರಿವೆ.

ವೈಭವ್ ಬಿಹಾರ ಅಂಡರ್-19 ತಂಡದ ಪರ ರಣಜಿ ಟ್ರೋಫಿ ಹಾಗೂ ವಿನೂ ಮಂಕಡ್ ಟ್ರೋಫಿಯಲ್ಲಿ ಆಡಿದ್ದು, ಒಂದು ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿ, ಬಿಹಾರದ ಮುಖ್ಯಮಂತ್ರಿ ಅವರಿಂದ ₹10 ಲಕ್ಷದ ವಿಶೇಷ ಬಹುಮಾನವೂ ಪಡೆದಿದ್ದಾರೆ.

ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ 7 ಪಂದ್ಯಗಳಲ್ಲಿ, ಅವರು 36 ಸರಾಸರಿಯಲ್ಲಿ 252 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ ಅರ್ಧಶತಕವೂ ಸೇರಿವೆ. ವೈಭವ್ 206.50 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ತಮ್ಮ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದಾರೆ. ಅವರ ಉನ್ನತ ಪ್ರದರ್ಶನದ ಮೇಲೆ ಭರಸೆಯಿಂದ ರಾಜಸ್ಥಾನ್ ರಾಯಲ್ಸ್ ತಂಡವು 2026 ಐಪಿಎಲ್ಗೂ ಅವರನ್ನು ಉಳಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow