ಟೀಂ ಇಂಡಿಯಾದ ನಿತೀಶ್ ರೆಡ್ಡಿಗೆ ನಾಯಕತ್ವದ ಪಟ್ಟ: APL ಲೀಗ್’ನಲ್ಲಿ ಭೀಮವರಂ ಬುಲ್ಸ್ ನಾಯಕ!

ಜುಲೈ 19, 2025 - 09:19
 0  15
ಟೀಂ ಇಂಡಿಯಾದ ನಿತೀಶ್ ರೆಡ್ಡಿಗೆ ನಾಯಕತ್ವದ ಪಟ್ಟ: APL ಲೀಗ್’ನಲ್ಲಿ ಭೀಮವರಂ ಬುಲ್ಸ್ ನಾಯಕ!

ಇಂಗ್ಲೆಂಡ್: ಪ್ರಸ್ತುತ ಟೀಂ ಇಂಡಿಯಾದ ಪರ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಆಲ್ರೌಂಡರ್ ನಿತೀಶ್ ರೆಡ್ಡಿಗೆ ನಾಯಕತ್ವದ ಬಹುಮಾನ ಲಭಿಸಿದೆ. ಟೀಂ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ನಡುವೆ ಮಿಂಚಲು ಅವರಿಗೆ ಇನ್ನಷ್ಟು ಸಮಯ ಬೇಕಾಗಿದ್ದರೂ, ನಿತೀಶ್ ಈಗ ಭೀಮಾವರಂ ಬುಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದು ಆಂಧ್ರದ ಅಗ್ರ ಮಟ್ಟದ ಟೂರ್ನಿಆಂಧ್ರ ಪ್ರೀಮಿಯರ್ ಲೀಗ್ (APL)–2025 ಆವೃತ್ತಿಗೆ ಸಂಬಂಧಿಸಿದೆ.

ಟೀಮ್ ಇಂಡಿಯಾದ ಪರ ಇಂಗ್ಲೆಂಡ್ ಪ್ರವಾಸದಲ್ಲಿರುವ ನಿತೀಶ್ ರೆಡ್ಡಿ ಈವರೆಗೆ ಎರಡು ಟೆಸ್ಟ್ಪಂದ್ಯಗಳಲ್ಲಿ ಭಾಗವಹಿಸಿದ್ದು, ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗಿಲ್ಲ. ಆದರೆ ಲಾರ್ಡ್ಸ್ ಟೆಸ್ಟ್ನಲ್ಲಿ ಅವರ ಬೌಲಿಂಗ್ ಸಾಧನೆ ಗಮನ ಸೆಳೆಯಿತು.

ಐಪಿಎಲ್ ಮೂಲಕ ಬೆಳಕಿಗೆ ಬಂದ ನಿತೀಶ್

ನಿತೀಶ್ ರೆಡ್ಡಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. 2024 ಐಪಿಎಲ್ನಲ್ಲಿ ಅವರ ವೈಖರಿ ಗಮನ ಸೆಳೆದಿದ್ದು, ₹6 ಕೋಟಿ ವೇತನದೊಂದಿಗೆ ಅವರು ತಮ್ಮ ನೆಚ್ಚಿನ ಆಟಗಾರರಾಗಿದ್ದಾರೆ. ಅವರ ಸಾಧನೆಯೇ ಅವರನ್ನು ಟೀಂ ಇಂಡಿಯಾದ ಟಿ20 ಹಾಗೂ ನಂತರ ಟೆಸ್ಟ್ ತಂಡಕ್ಕೂ ಪ್ರವೇಶಿಸಲು ಮಾರ್ಗಮಾಡಿಕೊಟ್ಟಿತು.

APL 2025: 7 ತಂಡಗಳ ನಡುವೆ ಕಣ

ಆಂಧ್ರ ಪ್ರೀಮಿಯರ್ ಲೀಗ್ 2025ರಲ್ಲಿ ಒಟ್ಟು 7 ತಂಡಗಳು ಭಾಗವಹಿಸುತ್ತಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ 19 ಪಂದ್ಯಗಳು ನಡೆಯಲಿವೆ. ಪಾಲ್ಗೊಳ್ಳುವ ತಂಡಗಳು ಹೀಗಿವೆ:

ಭೀಮಾವರಂ ಬುಲ್ಸ್

ಅಮರಾವತಿ ಲಯನ್ಸ್

ಕಾಕಿನಾಡ ಕಿಂಗ್ಸ್

ರಾಯಲ್ಸ್ ಆಫ್ ರಾಯಲಸೀಮಾ

ಸಿಂಹಾದ್ರಿ ವೈಜಾಗ್ ಲಯನ್ಸ್

ತುಂಗಭದ್ರ ವಾರಿಯರ್ಸ್

ವಿಜಯವಾಡ ಸನ್ಶೈನರ್ಸ್

 ಹನುಮ ವಿಹಾರಿ, ಕೆಎಸ್ ಭರತ್, ಶೇಖ್ ರಶೀದ್, ರಿಕಿ ಭೂಯಿ ಹಾಗೂ ಅಶ್ವಿನ್ ಹೆಬ್ಬಾರ್ ಟೂರ್ನಿಯ ಇತರೆ ಪ್ರಮುಖ ನಾಯಕರಾಗಿದ್ದಾರೆ. ಈವರೆಗೆ ನಡೆದ ಮೂರು ಆವೃತ್ತಿಗಳಲ್ಲಿ ಕೋಸ್ಟಲ್ ರೈಡರ್ಸ್, ರಾಯಲಸೀಮಾ ಕಿಂಗ್ಸ್ ಮತ್ತು ವೈಜಾಗ್ ವಾರಿಯರ್ಸ್ ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow