Asia Cup 2025: ಶ್ರೀಲಂಕಾ ತಂಡ ಪ್ರಕಟ: RCB ಮಾಜಿ ಸ್ಟಾರ್ ಸ್ಪಿನ್ನರ್ ಅಚ್ಚರಿಯ ಕಂಬ್ಯಾಕ್!
ಮುಂದಿನ ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಿಯಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ 16 ಸದಸ್ಯರ ತಂಡವನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ಬಾರಿ ಟಿ20 ಮಾದರಿಯಲ್ಲಿ ಚಾಂಪಿಯನ್ ಆಗಿದ್ದ ಲಂಕಾ ತಂಡವು ಈ ಬಾರಿಯೂ ಪ್ರಶಸ್ತಿಯನ್ನು ಕಾಪಾಡಿಕೊಳ್ಳುವ ಗುರಿಯೊಂದಿಗೆ ಅಖಾಡಕ್ಕಿಳಿಯಲಿದೆ.
ಈ ಬಾರಿ ತಂಡದ ನಾಯಕತ್ವವನ್ನು ಚರಿತ್ ಅಸಲಂಕಾ ಅವರಿಗೆ ವಹಿಸಲಾಗಿದೆ. ಅನುಭವಿ ಆಲ್ರೌಂಡರ್ ವನಿಂದು ಹಸರಂಗ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಅವರ ಫಿಟ್ನೆಸ್ ಸಮಸ್ಯೆಯಿಂದಾಗಿ ಮೊದಲು ಅನುಮಾನ ವ್ಯಕ್ತವಾಗಿದ್ದರೂ ಅಂತಿಮವಾಗಿ ಆಯ್ಕೆ ಸಮಿತಿ ಅವರನ್ನು ತಂಡದಲ್ಲಿ ಸೇರಿಸಿದೆ.
ಶ್ರೀಲಂಕಾದ ಗುಂಪು ಮತ್ತು ವೇಳಾಪಟ್ಟಿ
ಶ್ರೀಲಂಕಾ ತಂಡ ಗ್ರೂಪ್ ಬಿ ಯಲ್ಲಿ ಸ್ಥಾನ ಪಡೆದಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳೊಂದಿಗೆ ಪೈಪೋಟಿ ನಡೆಸಲಿದೆ.
ಸೆಪ್ಟೆಂಬರ್ 13: ಶ್ರೀಲಂಕಾ vs ಬಾಂಗ್ಲಾದೇಶ (ಮೊದಲ ಪಂದ್ಯ)
ಪ್ರಶಸ್ತಿಗಾಗಿ ಸ್ಪರ್ಧಿಗಳಲ್ಲಿ ಒಂದಾಗಿದ್ದರೂ, ಶ್ರೀಲಂಕಾದ ಇತ್ತೀಚಿನ ಪ್ರದರ್ಶನವು ಹಿನ್ನಡೆಯಲ್ಲಿದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೋಲಿನೊಂದಿಗೆ ಆರಂಭವಾದ ಲಂಕಾ ತಂಡ, ಬಳಿಕ ತವರಿನಲ್ಲೇ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನೂ ಸೋತಿತ್ತು..
ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕಮಿಲ್ ಮಿಶ್ರಾ, ದಸುನ್ ಶನಕ, ಕಮೆಂದು ಮೆಂಡಿಸ್, ವನಿಂದು ಹಸರಂಗ, ನುವಾನಿಡು ಫೆರ್ನಾಂಡೋ, ದುನಿತ್ ವೆಲ್ಲಾಲಗೆ, ಚಾಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಮಥೀಶ ಪತಿರಾನ, ನುವಾನ್ ತುಷಾರ, ದುಷ್ಮಂತ ಚಮೀರ, ಬಿನೌರ ಫೆರ್ನಾಂಡೋ.
ನಿಮ್ಮ ಪ್ರತಿಕ್ರಿಯೆ ಏನು?