ಸ್ಪೋಟಕ ಬ್ಯಾಟಿಂಗ್: ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ರೋಹಿತ್ ಶರ್ಮಾ

ಅಕ್ಟೋಬರ್ 29, 2025 - 15:59
 0  12
ಸ್ಪೋಟಕ ಬ್ಯಾಟಿಂಗ್: ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ರೋಹಿತ್ ಶರ್ಮಾ

ನಿವೃತ್ತಿಯ ವದಂತಿಗಳ ನಡುವೆ ಟೀಂ ಇಂಡಿಯಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಸಿಸಿ ನೂತನ ಏಕದಿನ ಶ್ರೇಯಾಂಕದಲ್ಲಿ 781 ಅಂಕಗಳೊಂದಿಗೆ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿ ಅಗ್ರಸ್ಥಾನಕ್ಕೇರಿದ್ದಾರೆ.

ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ (764), ಶುಭಮನ್ ಗಿಲ್‌ (745), ಪಾಕಿಸ್ತಾನದ ಬಾಬರ್ ಆಜಂ (739) ಮತ್ತು ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್‌ (734) ಅವರ ನಂತರ ಕ್ರಮವಾಗಿ 2, 3, 4, 5ನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳಲ್ಲಿ ಶತಕ, ಅರ್ಧಶತಕ ಸೇರಿ 202 ರನ್‌ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

ಆದರೆ ಕೊಹ್ಲಿ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಮೂಡಿದ್ದು, ಎರಡು ಶೂನ್ಯ ಸುತ್ತಿದ ಪರಿಣಾಮ ವಿರಾಟ್ ಕೊಹ್ಲಿ 725 ಅಂಕಗಳೊಂದಿಗೆ 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದಿದ್ದಾರೆ, ಮೂರನೇ ಪಂದ್ಯದಲ್ಲಿ ಅಜೇಯ 74 ರನ್‌ ಗಳಿಸಿದರೂ ಶ್ರೇಯಾಂಕದಲ್ಲಿ ಏರಿಕೆ ಕಾಣಲಿಲ್ಲ ಎನ್ನಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow