Asia Cup 2025: ಏಷ್ಯಾಕಪ್ ತಂಡದಿಂದ ಜೈಸ್ವಾಲ್, ಪಂತ್, ರಾಹುಲ್ ಔಟ್! ಯಾಕೆ ಗೊತ್ತಾ..?
ಮುಂಬೈ: ಏಷ್ಯಾಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಸೆಪ್ಟೆಂಬರ್ 9ರಿಂದ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಶುರುವಾಗಲಿದೆ. ಟೀಮ್ ಇಂಡಿಯಾದ 15 ಸದಸ್ಯರ ತಂಡವನ್ನು ಮುಂದಿನ ವಾರ ಪ್ರಕಟಿಸುವ ನಿರೀಕ್ಷೆಯಿದೆ. ಆದರೆ, ಮೂವರು ಪ್ರಮುಖ ಆಟಗಾರರು ಈ ಬಾರಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.
ಆಟಗಾರರ ಪಟ್ಟಿ ಪ್ರಕಾರ, ಯಶಸ್ವಿ ಜೈಸ್ವಾಲ್ ಅವರನ್ನು ಪರಿಗಣಿಸಲಾಗಿಲ್ಲ. ಆರಂಭಿಕರಾಗಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಶುಭ್ಮನ್ ಗಿಲ್ ಆಯ್ಕೆಗೊಳ್ಳುವ ಸಾಧ್ಯತೆ ಇದೆ.
ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದು, ಸಂಪೂರ್ಣ ಫಿಟ್ನೆಸ್ ಪಡೆಯಲು ಇನ್ನಷ್ಟು ಸಮಯ ಬೇಕಿರುವುದರಿಂದ ಅವರನ್ನು ಸಹ ಏಷ್ಯಾಕಪ್ನಿಂದ ಹೊರಗಿಡಲು ಬಿಸಿಸಿಐ ಯೋಚಿಸಿದೆ. ಪಂತ್ ಬದಲಿಗೆ ಮತ್ತೋರ್ವ ವಿಕೆಟ್ ಕೀಪರ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಕೆ.ಎಲ್. ರಾಹುಲ್ ಅವರಿಗೂ ಈ ಬಾರಿಯ ಏಷ್ಯಾಕಪ್ನಲ್ಲಿ ಸ್ಥಾನ ಸಿಗದಿರುವ ವರದಿ ಬಂದಿದೆ. ಆರಂಭಿಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠ ಆಟಗಾರರಿರುವುದರಿಂದ ಅವರನ್ನು ಪರಿಗಣಿಸದ ನಿರ್ಧಾರ ಕೈಗೊಳ್ಳಲಾಗಿದೆ.
ಪಂತ್ ಹೊರಗುಳಿದರೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿರ್ವಹಿಸಲಿದ್ದಾರೆ. ಎರಡನೇ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಅಥವಾ ಜಿತೇಶ್ ಶರ್ಮಾ ಆಯ್ಕೆಗೊಳ್ಳುವ ಸಾಧ್ಯತೆ ಇದೆ. ಈ ಬಾರಿಯ ಏಷ್ಯಾಕಪ್ನಲ್ಲಿ ಯುವ ದಾಂಡಿಗರ ತಂಡವೇ ಕಣಕ್ಕಿಳಿಯುವ ನಿರೀಕ್ಷೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?