ಏಕದಿನ ವಿಶ್ವಕಪ್​ ಟೂರ್ನಿ ಯಾವಾಗ!? ದಿನಾಂಕ, ಸ್ಥಳದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ! ಬೆಂಗಳೂರಲ್ಲೇ ಮೊದಲ ಪಂದ್ಯ!

ಜೂನ್ 5, 2025 - 09:14
ಜೂನ್ 4, 2025 - 15:43
 0  13
ಏಕದಿನ ವಿಶ್ವಕಪ್​ ಟೂರ್ನಿ ಯಾವಾಗ!? ದಿನಾಂಕ, ಸ್ಥಳದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ! ಬೆಂಗಳೂರಲ್ಲೇ ಮೊದಲ ಪಂದ್ಯ!

ಏಕದಿನ ಕ್ರಿಕೆಟ್ ಮಹಿಳೆಯರ ವಿಶ್ವಕಪ್ ಟೂರ್ನಿಯು ಸೆಪ್ಟೆಂಬರ್ 30ರಿಂದ ಆರಂಭವಾಗಲಿವೆ. ಉದ್ಘಾಟನಾ ಪಂದ್ಯವು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ.

2025ರ ಮಹಿಳಾ ಏಕದಿನ ವಿಶ್ವಕಪ್‌ನ ವೇಳಾಪಟ್ಟಿ, ಸ್ಥಳಗಳು ಮತ್ತು ತಂಡಗಳ ವಿವರಗಳನ್ನು ICC ಪ್ರಕಟಿಸಿದೆ. ಈ ಮಹಿಳಾ ಏಕದಿನ ವಿಶ್ವಕಪ್​ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಸೆಪ್ಟೆಂಬರ್ 30, 2025ರಂದು ಆರಂಭವಾಗಲಿದ್ದು, ನವೆಂಬರ್ 2, 2025ರಂದು ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. 

2025ರ ಮಹಿಳಾ ವಿಶ್ವಕಪ್​ ಟೂರ್ನಿಯು ಸೆಪ್ಟೆಂಬರ್​ 30 ರಿಂದ ನವೆಂಬರ್​ 2 ರವವರೆಗೆ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ಸೇರಿ ಒಟ್ಟು 5 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಅಕ್ಟೋಬರ್​ 30ಕ್ಕೆ ಸೆಕೆಂಡ್​ ಸೆಮಿಫೈನಲ್ ಪಂದ್ಯ ಪೂರ್ಣಗೊಳ್ಳಲಿದೆ. ಸೆಮಿಫೈನಲ್ ಪಂದ್ಯ ಮುಗಿದ ಮೂರು ದಿನಗಳ ಬಳಿಕ ಅಂದರೆ ನವೆಂಬರ್​ 2 ರಂದು ಫೈನಲ್​ ಪಂದ್ಯ ನಡೆಯಲಿದೆ.

ಮಹಿಳಾ ವಿಶ್ವಕಪ್​ ಟೂರ್ನಿಯ ಪಂದ್ಯಗಳು ಭಾರತದ ಪ್ರತಿಷ್ಠಿತ ನಗರಗಳಾದ ಬೆಂಗಳೂರು, ಗುವಾಹಟಿ, ಇಂದೋರ್ ಹಾಗೂ ವಿಶಾಖಪಟ್ಟಣಂನಲ್ಲಿ ನಡೆಯಲಿವೆ. ಇನ್ನು ಶ್ರೀಲಂಕಾದ ಕೊಲೊಂಬೊದಲ್ಲೂ ಮ್ಯಾಚ್​ಗಳು ನಿಗದಿಯಾಗಿವೆ. ಸೆಪ್ಟೆಂಬರ್​ 30 ರಂದು ಬೆಂಗಳೂರಿನಲ್ಲಿ ಭಾರತ ತಂಡ ಉದ್ಘಾಟನಾ ಪಂದ್ಯ ಆಡಲಿದೆ. ಅಕ್ಟೋಬರ್​ 29 ರಂದು ಮೊದಲ ಸೆಮಿಫೈನಲ್ ಗುವಾಹಟಿ ಅಥವಾ ಕೊಲೊಂಬೊದಲ್ಲಿ ನಡೆಯಲಿದೆ. ಅಕ್ಟೋಬರ್ 30 ರಂದು ಎರಡನೇ ಸೆಮಿಫೈನಲ್ ಬೆಂಗಳೂರು ಅಥವಾ ಕೊಲೊಂಬೊದಲ್ಲಿ ನಡೆಯಲಿದೆ.

2025ರ ಮಹಿಳಾ ವಿಶ್ವಕಪ್​ನಲ್ಲಿ ವಿಶ್ವದ 8 ತಂಡಗಳು ಭಾಗಿಯಾಗಲಿವೆ. ಭಾರತದ ಮಹಿಳಾ ತಂಡ ಸೇರಿದಂತೆ, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿಶ್ವಕಪ್​ನಲ್ಲಿ ಭಾಗಿಯಾಗಲಿವೆ. ಪಾಕಿಸ್ತಾನದ ಮಹಿಳಾ ತಂಡದ ಎಲ್ಲ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ತಂಡ ಸೆಮಿಫೈನಲ್​ ಮತ್ತು ಫೈನಲ್​ಗೆ ಪ್ರವೇಶ ಪಡೆದರೆ ಈ ಎರಡು ಮಹತ್ವದ ಪಂದ್ಯಗಳನ್ನು ಕೊಲಂಬೊದಲ್ಲೇ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow