BBK11: ಈ ವಾರ ದೊಡ್ಮನೆಯಲ್ಲಿ ಎಲಿಮಿನೇಷನ್ ಇಲ್ವಾ!? ಬಿಗ್ ಬಾಸ್ ಕೊಟ್ಟ ಹಿಂಟ್ BC ಏನು!?

ಎರಡು ತಿಂಗಳು ಪೂರ್ಣಗೊಳಿಸಿರೋ ಬಿಗ್ ಬಾಸ್ ಈ ವಾರ ದೊಡ್ಡ ಟ್ವಿಸ್ಟ್ ಕೊಡಲು ರೆಡಿ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಹನ್ನೊಂದನೆಯ ವಾರದ ಮನೆಯ ಕ್ಯಾಪ್ಟನ್ ಆಗಿ ನಟಿ ಗೌತಮಿ ಜಾಧವ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಬರೀ ಟ್ವಿಸ್ಟ್‌ಗಳೇ ಆಗಿದ್ದು, ವಾರದ ಟಾಸ್ಕ್ ಗೆಲ್ಲದಿದ್ದರೂ ಸಹ ಮನೆಯ ಕ್ಯಾಪ್ಟನ್ ಆಗುವ ಅವಕಾಶ ಗೌತಮಿಗೆ ಒಲಿದು ಬಂದಿದೆ. ವಾರದ ಆಟ ಇಂಟ್ರಸ್ಟಿಂಗ್ ಆಗಿದ್ದು, ವಾರಾಂತ್ಯ ಬರುತ್ತಿದ್ದಂತೆ ಎಲಿಮಿನೇಷನ್ ಲೆಕ್ಕಾಚಾರ ಆರಂಭವಾಗಿದೆ.
ಅಷ್ಟಕ್ಕೂ ಏನು ಆ ಟ್ವಿಸ್ಟ್? ಈ ವಾರ ವೀಕ್ಷಕರು ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ, ರಜತ್ ಈ ವಾರ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಯಾವುದೇ ವೋಟಿಂಗ್ ಲೈನ್ ತೆಗೆದಿಲ್ಲ. ಜನರಿಗೆ ವೋಟ್ ಮಾಡುವ ಅವಕಾಶವನ್ನು ಜಿಯೋ ಸಿನಿಮಾದಲ್ಲಿ ನೀಡಿಲ್ಲ. ಹೀಗಾಗಿ, ಈ ವಾರ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ಇದ್ದವರು ಶಿಶಿರ್ ಹಾಗೂ ಐಶ್ವರ್ಯಾ. ಆದರೆ, ಶೋಭಾ ಶೆಟ್ಟಿ ಅವರು ಅನಾರೋಗ್ಯ ಕಾರಣ ನೀಡಿ ಎಲಿಮಿನೇಟ್ ಆದರು. ಈ ಮೂಲಕ ಶಿಶಿರ್ ಹಾಗೂ ಐಶ್ವರ್ಯನ ಸೇವ್ ಮಾಡಲಾಯಿತು. ಈ ವಾರ ಆ ಪ್ರಕ್ರಿಯೆಯನ್ನು ಮುಂದುವರಿಸಿ ಶಿಶಿರ್ ಹಾಗೂ ಐಶ್ವರ್ಯಾ ನಡುವೆ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ 11 ಜನರು ಇದ್ದಾರೆ. ಟಾಪ್ ಐವರನ್ನು ಬಿಟ್ಟರೆ ಉಳಿಯೋದು ಕೇವಲ ಆರು ಸ್ಪರ್ಧಿಗಳು ಮಾತ್ರ. ಮುಂಬರುವ ವಾರಗಳ ಸಂಖ್ಯೆ ಹಾಗೂ ಎಲಿಮಿನೇಟ್ ಆಗಬೇಕಿರುವ ಸ್ಪರ್ಧಿಗಳ ಸಂಖ್ಯೆ ಸರಿ ಸಮನವಾಗಿದೆ ಎನ್ನಬಹುದು. ಮುಂದಿನ ದಿನಗಳಲ್ಲಿ ಡಬಲ್ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಬಹುದು. ಈ ಕಾರಣಕ್ಕೆ ಈ ವಾರ ಯಾರನ್ನೂ ಎಲಿಮಿನೇಟ್ ಮಾಡದೆಯೂ ಇರಬಹುದು ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






