ಮಹಿಳಾ ಸ್ಪರ್ಧಿಯೇ ಈ ಬಾರಿಯ ಬಿಗ್ ಬಾಸ್ ವಿನ್ನರ್: ಟ್ರೋಫಿ ಕೊಟ್ಟ ಹಿಂಟ್ ಏನು!?

ಬಿಗ್ ಬಾಸ್' ಫಿನಾಲೆಗೆ 3 ದಿನ ಬಾಕಿ ಉಳಿದಿದೆ. ಸದ್ಯ ಮನೆಯೊಳಗೆ ಆರು ಮಂದಿಯಲ್ಲಿ ಯಾರಿಗೆ ಈ ಬಾರಿಯ 'ಬಿಗ್ ಬಾಸ್' ಟ್ರೋಫಿ ಸೇರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಕಳೆದ ವಾರವಷ್ಟೇ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಹೇಗಿರಲಿದೆ ಎಂಬುದನ್ನು ತೋರಿಸಲಾಗಿತ್ತು. ಆದರೆ ಇದೀಗ ಆ ಟ್ರೋಫಿ ಬಿಗ್ ಬಾಸ್ ಮನೆಯೊಳಗೆ ಬಂದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಕಪ್ ಗೆಲ್ಲುವ ಸನಿಹದಲ್ಲಿ ಇದ್ದಾರೆ. ಅವರು ಉತ್ತಮ ಆಟ ಪ್ರದರ್ಶನ ನೀಡಿದ್ದಾರೆ. ‘ಬಿಗ್ ಬಾಸ್ 11’ರಲ್ಲಿ ಕಪ್ ಗೆಲ್ಲುವ ಕನಸು ಕಂಡಿರುವ ಅವರಿಗೆ ಸಾಕಷ್ಟು ಅಡೆತಡೆಗಳು ಕೂಡ ಇವೆ. ಅವರು ಕಪ್ ಗೆಲ್ಲೋದು ಅಷ್ಟು ಸುಲಭದಲ್ಲಿ ಇಲ್ಲ.
ಇಷ್ಟು ದಿನ ಹನುಮಂತು ಅಥವಾ ತ್ರಿವಿಕ್ರಮ್ ಗೆಲ್ಲುತ್ತಾರೆ ಎನ್ನುತ್ತಿದ್ದವರು ನಿನ್ನೆ ಟ್ರೋಫಿ ನೋಡಿ ಹೆಣ್ಣುಮಕ್ಕಳು ಗೆಲ್ಲುವುದು ಎನ್ನಲಾಗಿದೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಭವ್ಯಾ ಗೌಡ. ರೀಲ್ಸ್ ಮತ್ತು ಟಿಕ್‌ಟಾಕ್ ಮೂಲಕ ಕಿರುತೆರೆ ಜನಪ್ರಿಯ ಗೀತಾ ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಸೀರಿಯಲ್ ಮುಗಿಯುತ್ತಿದ್ದಂತೆ ಭವ್ಯಾ ಬ್ರೇಕ್ ತೆಗೆದುಕೊಂಡು ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ. ಆರಂಭದಿಂದಲೂ ಟಫ್ ಫೈಟ್ ಕೊಟ್ಟಿರುವ ಭವ್ಯಾ ಎರಡು ವಾರ ಕ್ಯಾಪ್ಟನ್ ಆಗಿದ್ದಾರೆ. ಹನುಮಂತು ಜೊತೆ ಕೊಂಚ ರಫ್ ಆಗಿ ವರ್ತಿಸಿದ್ದಕ್ಕೆ ಶಿಕ್ಷೆಯಾಗಿ ಕಳಪೆ ಪಡೆದಳೇ ಹೊರತು ಟಾಸ್ಕ್ ಸೋತು ಅಲ್ಲ. ಅಲ್ಲದೆ ಜಗಳ ಮಾಡುವ ಸಮಯದಲ್ಲಿ ಜಗಳ ಜೋರು ಮಾಡುವುದು, ತಮಾಷೆ ಮಾಡುವ ಸಮಯಲ್ಲಿ ಸಖತ್ ಕಾಮಿಡಿ, ಜನರಿಗೆ ಕಂಟೆಂಟ್ ನೀಡಲು ತ್ರಿವಿಕ್ರಮ್ ಜೊತೆ ಟೈಮ್ ಪಾಸ್ ಚರ್ಚೆ ಮಾಡುವುದು. ಪ್ರತಿಯೊಂದು ಜನರ ಗಮನ ಸೆಳೆದಿದೆ. ವೀಕೆಂಡ್‌ನಲ್ಲಿ ಭವ್ಯಾ crying baby ಆದರೂ ಜನರ ಮನಸ್ಸಿಗೆ ಹತ್ತಿರವಾಗುತ್ತಿದ್ದಾಳೆ.
ಬಿಗ್ ಬಾಸ್ ಸೀಸನ್ 11ಕ್ಕೆ ಕಾಲಿಡುತ್ತಿದ್ದಂತೆ ನರಕವಾಸಿ ಆಗಿದ್ದ ಮೋಕ್ಷಿತಾ ಸಖತ್ ಕೂಲ್ ವ್ಯಕ್ತಿಯಾಗಿರುತ್ತಾರೆ. ಇಡೀ ಮನೆ ಒಂದಾದಾಗ ಉಗ್ರಂ ಮಂಜು ಮತ್ತು ಗೌತಮಿ ತಂಡ ಸೇರಿಕೊಂಡು ಟೀಂ ಪ್ಲ್ಯಾನಿಂಗ್ ಮಾಡುತ್ತಾರೆ. ಕೊಂಚ ಮನಸ್ಥಾಪದಿಂದ ಅವರಿಬ್ಬರನ್ನು ಬಿಟ್ಟು ಶಿಶಿರ್ ಮತ್ತು ಐಶ್ವರ್ಯ ಜೊತೆ ಸೇರುತ್ತಾರೆ. ಅವರಿಬ್ಬರು ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ತ್ರಿವಿಕ್ರಮ್ ಮತ್ತು ಭವ್ಯಾ ಜೊತೆ ಹೋಗುತ್ತಾರೆ. ಕೊನೆ ಕೊನೆಯಲ್ಲಿ ಮಂಜು ಮತ್ತು ಗೌತಮಿ ಜೊತೆ ಚೆನ್ನಾಗಿ ಆಗುತ್ತಾರೆ. ಒಮ್ಮೆ ಎಲಿಮಿನೇಷನ್ ವಿಚಾರದಲ್ಲಿ ಬಾಟಮ್ 2ನೇ ಸ್ಥಾನಕ್ಕೆ ಬಂದಿದ್ದ ಮೋಕ್ಷಿತಾ ಸೇವ್ ಆಗುತ್ತಿದ್ದಂತೆ ಫಯರ್ ಬ್ರ್ಯಾಂಡ್ ಆಗಿಬಿಡುತ್ತಾರೆ. ತ್ರಿವಿಕ್ರಮ್ ಜೊತೆ ಜಗಳ ಮಾಡಿಕೊಂಡು ದ್ವೇಷ ಕಟ್ಟಲು ಶುರು ಮಾಡುತ್ತಾರೆ. ಹಲವು ದಿನಗಳ ಕಾಲ ಈ ಜಗಳ ನಡೆಯುತ್ತದೆ. ಅದಾದ ಮೇಲೆ ಉತ್ತಮ ಪಡೆಯುತ್ತಾರೆ ಆದರೆ ಕಳಪೆ ಪಡೆದೇ ಇಲ್ಲ. ಈಗ ಟಿಕೆಟ್ ಟು ಫಿನಾಲೆಯಲ್ಲಿ ಹನುಮಂತು ಸೇವ್ ಮಾಡಿದ್ದ ಕಾರಣ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ. ಪ್ರತಿಯೊಂದು ಹಂತದಲ್ಲೂ ಮೋಕ್ಷಿತಾ ಮನೋರಂಜನೆ ನೀಡಿದ್ದಾರೆ. ಹೀಗಾಗಿ ಗೆಲ್ಲಬೇಕು ಅಂತಿದ್ದಾರೆ ವೀಕ್ಷಕರು.
ನಟಿ ಶ್ರುತಿ ಕೃಷ್ಣ ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ ಯಾವ ಹೆಣ್ಣುಮಗಳೂ ಮತ್ತೆ ಟ್ರೋಫಿ ಹಿಡಿದಿಲ್ಲ ಅನ್ನೋ ಬೇಸರ ವೀಕ್ಷಕರಿಗಿತ್ತು. ಆದರೆ ನಿನ್ನೆ ಬಿಗ್ ಬಾಸ್ ಟ್ರೋಫಿ ನೋಡಲು ಸೇಮ್ ಹಕ್ಕಿ ರೆಕ್ಕೆ ಬಿಚ್ಚಿ ಹಾರುತ್ತಿರುವಂತೆ ಇತ್ತು. ಈ ರೀತಿ ಟ್ರೋಫಿ ಹೆಣ್ಣು ಮಕ್ಕಳಿಗೆ ಹೆಚ್ಚಿಗೆ ಇಷ್ಟ ಆಗಲಿದೆ. ಅಲ್ಲದೇ ಇದು ಹೆಣ್ಣು ಮಕ್ಕಳ ಕೈ ಸೇರುತ್ತದೆ ಅನ್ನೋ ಸುಳಿವು ಕೂಡ ಎಂದು ವೀಕ್ಷಕರು ಹೇಳುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






