ಇಂದು ಭಾರತ-ಪಾಕಿಸ್ತಾನ ಮ್ಯಾಚ್‌: ಎಷ್ಟು ಗಂಟೆಗೆ ಆರಂಭವಾಗತ್ತೆ.? ಮೊಬೈಲ್‌ʼನಲ್ಲಿ ನೋಡೊದು ಹೇಗೆ..?

ಸೆಪ್ಟೆಂಬರ್ 14, 2025 - 10:47
 0  15
ಇಂದು ಭಾರತ-ಪಾಕಿಸ್ತಾನ ಮ್ಯಾಚ್‌: ಎಷ್ಟು ಗಂಟೆಗೆ ಆರಂಭವಾಗತ್ತೆ.? ಮೊಬೈಲ್‌ʼನಲ್ಲಿ ನೋಡೊದು ಹೇಗೆ..?

2025 ರ T20 ಏಷ್ಯಾ ಕಪ್‌ನ ಹೈ-ವೋಲ್ಟೇಜ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ನಡೆಯಲಿದ್ದು, ಪ್ರಪಂಚದಾದ್ಯಂತದ ಅಭಿಮಾನಿಗಳ ಕಣ್ಣುಗಳು ಈ ಪಂದ್ಯದ ಮೇಲೆ ನೆಟ್ಟಿವೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ರಣರೋಚಕ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಟಿ20 ಕ್ರಿಕೆಟ್‌ನ ಶ್ರೇಷ್ಠ ಆಟಗಾರರನ್ನು ಹೊಂದಿವೆ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ಎರಡೂ ತಂಡ ಯುವ ಆಟಗಾರರಿಂದ ಕೂಡಿದೆ. ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದ್ದು, ಭಾನುವಾರ ಸಂಜೆ 8 ಗಂಟೆಗೆ ಪಂದ್ಯಾಟ ಆರಂಭವಾಗಲಿದೆ. ಇನ್ನು ಇದಕ್ಕೂ ಅರ್ಧಗಂಟೆ ಮೊದಲು ಅಂದರೆ 7.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ತಾನಾಡಿದ ಮೊದಲ ಪಂದ್ಯದಲ್ಲಿ ಯುಎಇ ಎದುರು 9 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಇನ್ನೊಂದೆಡೆ ಪಾಕಿಸ್ತಾನ ತಂಡವು ಓಮಾನ್ ಎದುರು ಸುಲಭ ಜಯ ದಾಖಲಿಸಿದ್ದು, ಇದೀಗ ಭಾರತದ ಸವಾಲನ್ನು ಎದುರು ನೋಡುತ್ತಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್‌ ಹಾಗೂ ಓಟಿಟಿಯಲ್ಲಿ ಸೋನಿ ಲಿವ್‌ನಲ್ಲಿ ನೇರಪ್ರಸಾರದ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ಬಹುತೇಕ ಸೂಪರ್ 4 ಹಂತಕ್ಕೆ ಲಗ್ಗೆಯಿಡಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow