ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿ ಆಗ್ಬಹುದು! ಆದ್ರೆ ಹಿಗಾಗ್ಬೇಕು ಅಷ್ಟೇ!

ಸೆಪ್ಟೆಂಬರ್ 23, 2025 - 09:06
 0  16
ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿ ಆಗ್ಬಹುದು! ಆದ್ರೆ ಹಿಗಾಗ್ಬೇಕು ಅಷ್ಟೇ!

ಏಷ್ಯಕಪ್ 2025 ರಲ್ಲಿ ಭಾರತ, ಪಾಕಿಸ್ತಾನ ತಂಡವು ಎರಡು ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಭಾರತ ಗೆದ್ದು ಬೀಗಿದೆ.

ಗೆಲುವಿನೊಂದಿಗೆ ಭಾರತ ತಂಡವು ತನ್ನ ಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಅದರಂತೆ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ತಂಡಗಳನ್ನು ಸೋಲಿಸಿದರೆ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಬಹುದು. ಒಂದು ವೇಳೆ ಪಾಕಿಸ್ತಾನ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾವನ್ನು ಮತ್ತೆ ಎದುರಿಸಬಹುದು. ಅದು ಹೇಗೆಂದರೆ…

ಈ ಬಾರಿಯ ಏಷ್ಯಾಕಪ್ ಟೂರ್ನಿ ನಡೆಯುತ್ತಿರುವುದು ರೌಂಡ್ ರಾಬಿನ್ ಮಾದರಿಯಲ್ಲಿ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಪಂದ್ಯ ಇರುವುದಿಲ್ಲ. ಬದಲಾಗಿ ಸೂಪರ್-4 ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿವೆ. ಇದೀಗ ಟೀಮ್ ಇಂಡಿಯಾ ವಿರುದ್ಧ ಸೋತಿರುವ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಬೇಕು. ಇತ್ತ ಭಾರತ ತಂಡವು ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ವಿರುದ್ಧ ಗೆಲ್ಲುವುದು ನಿಶ್ಚಿತ. ಇದರಿಂದ ಟೀಮ್ ಇಂಡಿಯಾದ ಪಾಯಿಂಟ್ಸ್ 6 ಆಗಲಿದೆ.

ಅತ್ತ ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನ್ ತಂಡವು ಒಟ್ಟು 4 ಅಂಕಗಳನ್ನು ಪಡೆದು ಪಾಯಿಂಟ್ಸ್​ ಟೇಬಲ್​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಬಹುದು. ಈ ಮೂಲಕ ಫೈನಲ್​ಗೆ ಅರ್ಹತೆ ಪಡೆಯಲು ಅವಕಾಶ ಹೊಂದಿದೆ. ಈ ಮೇಲಿನ ಸಮೀಕರಣದಂತೆ, ಅಂದರೆ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ತಂಡಗಳಿಗೆ ಸೋಲುಣಿಸಿದರೆ ಫೈನಲ್​ನಲ್ಲಿ ಭಾರತ ತಂಡವನ್ನು ಎದುರಿಸುವುದು ಬಹುತೇಕ ಖಚಿತ. ಹೀಗಾಗಿ ಈ ಬಾರಿಯ ಏಷ್ಯಾಕಪ್​ ಫೈನಲ್​ನಲ್ಲಿ ಇಂಡೊ-ಪಾಕ್ ಕದನವನ್ನು ನಿರೀಕ್ಷಿಸಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow