ಬಿಗ್ ಬಾಸ್ ಮನೆಯಿಂದ ಹಂಸಾ ಔಟ್: ಹೋಗೋದಕ್ಕೂ ಮುನ್ನ ಹೇಳಿದ್ದೇನು!?

ಬಿಗ್ ಬಾಸ್ ಮನೆಯಿಂದ ಹಂಸಾ ಎಲಿಮಿನೇಷನ್ ಆಗಿದ್ದಾರೆ. ಈ ವಾರ ಡೇಂಜರ್ ಝೋನ್ನ ಅಂತಿಮ ಹಂತಕ್ಕೆ ಮೋಕ್ಷಿತಾ ಮತ್ತು ಹಂಸಾ ಬಂದಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಭಾನುವಾರ ತೋರಿಸಿರಲಿಲ್ಲ. ಆದರೆ ಸೋಮವಾರದ ಸಂಚಿಕೆಯಲ್ಲಿ ಹಂಸಾ ಎಲಿಮಿನೇಟ್ ಆಗಿರುವುದು ಸ್ಪಷ್ಟವಾಗಿದೆ.
ಪ್ರತಿ ವಾರ ಎಲಿಮಿನೇಟ್ ಆದವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ಇತ್ತೀಚೆಗೆ ಅವರ ತಾಯಿ ನಿಧನರಾದ್ದರಿಂದ ವೀಕೆಂಡ್ ಸಂಚಿಕೆ ನಡೆಸಿಕೊಡಲು ಸುದೀಪ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಹಂಸಾ ಅವರು ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡದೇ ಬಿಗ್ ಬಾಸ್ ಆಟವನ್ನು ಮುಗಿಸುವಂತಾಯಿತು. ಈ ಮೊದಲು ಎಲಿಮಿನೇಟ್ ಆದ ರಂಜಿತ್, ಜಗದೀಶ್ ಅವರಿಗೂ ವೇದಿಕೆಗೆ ಬರುವ ಅವಕಾಶ ಸಿಕ್ಕಿರಲಿಲ್ಲ.
ಎಲಿಮಿನೇಟ್ ಆಗುವುದಕ್ಕೂ ಮುನ್ನ ಹಂಸಾ ಅವರು ತಮ್ಮ ಇಷ್ಟು ದಿನಗಳ ಜರ್ನಿಯನ್ನು ಮೆಲುಕು ಹಾಕಿದರು. ‘ಇದು ಜೀವನಪೂರ್ತಿ ಇರುವಂತಹ ನೆನಪು. 17 ರೀತಿಯ ವ್ಯಕ್ತಿತ್ವ ಇರುವ ಜನರ ಮಧ್ಯೆ ನಾನು ಒಂದೇ ಮನೆಯಲ್ಲಿ ಇನ್ಮುಂದೆ ಎಂದಿಗೂ ಇರುವುದಿಲ್ಲ ಅನಿಸುತ್ತದೆ.
ಹೊರಗಡೆಯಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವುದಕ್ಕೂ ಒಳಗಡೆಯಿಂದ ನೋಡೋದಕ್ಕೂ ವ್ಯತ್ಯಾಸ ಇದೆ. ಇಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುವಾಗ ಫ್ರೆಂಡ್ಸ್ ಹಾಗೂ ಫ್ಯಾಮಿಲಿಯ ಸಲಹೆ ಇರಲ್ಲ. ಹೊರಗೆ ಹೋದ ಬಳಿಕ ನಾನು ಮತ್ತಷ್ಟು ಸ್ಟ್ರಾಂಗ್ ಆಗುತ್ತೇನೆ. ನನಗೆ ತಾಳ್ಮೆ ಇದೆ ಎಂಬುದು ಇಲ್ಲಿಗೆ ಬಂದ ಬಳಿಕ ತಿಳಿಯಿತು’ ಎಂದು ಹಂಸಾ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






