ಸುದೀಪ್ ತಾಯಿ ನಿಧನ: ಪತ್ರದ ಮುಖೇನ ಸಂತಾಪ ಸೂಚಿಸಿದ PM ಮೋದಿ! ಕಿಚ್ಚನ ಪ್ರತಿಕ್ರಿಯೇ ಏನೂ ಗೊತ್ತಾ..?

ಅಕ್ಟೋಬರ್ 28, 2024 - 21:59
 0  18
ಸುದೀಪ್ ತಾಯಿ ನಿಧನ: ಪತ್ರದ ಮುಖೇನ ಸಂತಾಪ ಸೂಚಿಸಿದ PM ಮೋದಿ! ಕಿಚ್ಚನ ಪ್ರತಿಕ್ರಿಯೇ ಏನೂ ಗೊತ್ತಾ..?

ಬೆಂಗಳೂರು:- ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಪತ್ರದ ಮುಖೇನ PM ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.  ತಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಇರುವ ಸುದೀಪ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನದ ನುಡಿಗಳನ್ನು ತಿಳಿಸಿದ್ದಾರೆ. ಪತ್ರದ ಮೂಲಕ ಮೋದಿ ಧೈರ್ಯ ತುಂಬಿದ್ದಾರೆ. ಆ ಪತ್ರದ ಪ್ರತಿಯನ್ನು ಸುದೀಪ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಿಮ್ಮ ತಾಯಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ನೋವಾಗಿದೆ. ತಾಯಿಯ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಅವರ ಜೊತೆ ನಿಮಗೆ ಇದ್ದ ಬಾಂಧವ್ಯ ಹಾಗೂ ಅವರ ಪರಿಣಾಮ ನಿಮ್ಮ ಮೇಲೆ ಎಷ್ಟಿತ್ತು ಎಂಬುದನ್ನು ಈಗ ನಿಮ್ಮ ದುಃಖವೇ ಹೇಳುತ್ತಿದೆ. ನೆನಪುಗಳ ಮೂಲಕ ಅವರು ಶಾಶ್ವತವಾಗಿ ಇರಲಿದ್ದಾರೆ ಎಂದು ಮೋದಿ ಅವರು ಪತ್ರದಲ್ಲಿ ಬರೆದಿದ್ದಾರೆ.

 ಈ ಕಷ್ಟದ ಸಂದರ್ಭದಲ್ಲಿ ನಾನು ನಿಮಗೆ ಸಂತಾಪ ಸೂಚಿಸುತ್ತೇನೆ. ನಿಮಗಾಗಿ ಮತ್ತು ನಿಮ್ಮ ಹಿತೈಷಿಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ನೋವನ್ನು ಭರಿಸುವ ಶಕ್ತಿ ನಿಮಗೆ ಸಿಗಲಿ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪತ್ರವನ್ನು ಪೂರ್ಣಗೊಳಿಸಿದ್ದಾರೆ. ಸುದೀಪ್​ ಅವರು ಈ ಪತ್ರದ ಪ್ರತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow