ಅತ್ತಿಗೆಯನ್ನು ಮಂಚಕ್ಕೆ ಕರೆದ ಮೈದುನ: ನಿರಾಕರಿಸಿದ್ದಕ್ಕೆ ಬಲವಂತವಾಗಿ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ..!

ಮಾರ್ಚ್ 25, 2025 - 22:17
 0  180
ಅತ್ತಿಗೆಯನ್ನು ಮಂಚಕ್ಕೆ ಕರೆದ ಮೈದುನ: ನಿರಾಕರಿಸಿದ್ದಕ್ಕೆ ಬಲವಂತವಾಗಿ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ..!

ಧಾರವಾಡ: ಅತ್ತಿಗೆ ಹಾಗೂ ಮೈದುನನ ನಡುವಿನ ಸಂಬಂಧ ಅದೆಷ್ಟು ಪವಿತ್ರ ಎಂಬುವುದನ್ನು ರಾಮಾಯಣವೇ ತಿಳಿಸಿ ಕೊಟ್ಟಿದೆ. ಇಲ್ಲಿ ಸೀತೆ ಹಾಗೂ ಲಕ್ಷ್ಮಣನ ರೂಪದಲ್ಲಿ ಈ ಸಂಬಂಧದ ಮತ್ವವನ್ನು ತೋರಿಸಿಕೊಡಲಾಗಿದೆ. ಆದರೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ಅಣ್ಣನ ಹೆಂಡತಿ‌ ಮೇಲೆ ಕಣ್ಣಾಗಿದ್ದು, ಲೈಂಗಿಕವಾಗಿ ಸಹಕರಿಸುವಂತೆ ಕರೆದಿದ್ದಾನೆ. ಆದ್ರೆ, ಇದಕ್ಕೆ ನಿರಾಕರಿಸಿದ ಅತ್ತಿಗೆ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗೀಯ ವರ್ತನೆ ತೋರಿಸುವ ಘಟನೆ ನಡೆದಿದೆ.

ರಮೇಶ್ ಮೇಗುಂಡಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಹ ಸ್ವಂತ ಅತ್ತಿಗೆಯನ್ನ(ಅಣ್ಣನ ಹೆಂಡತಿ) ಮಂಚಕ್ಕೆ ಕರೆದಿದ್ದಾನೆ. ಆದ್ರೆ, ಇದಕ್ಕೆ ಅತ್ತಿಗೆ ಸವಿತಾ ಬಸಪ್ಪ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ರಮೇಶ್, ಅತ್ತಿಗೆಯನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಮುಖ, ಎದೆ ಭಾಗ , ಗಲ್ಲಕ್ಕೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

 ಬಳಿಕ ಮೈದುನನಿಂದ ತಪ್ಪಿಸಿಕೊಂಡು ಮನೆಯಿಂದ ಕೈಗಾಡಿಕೊಂಡು ಹೊರಗೆ ಬಂದಿದ್ದಾಳೆ. ಆಗ ಅಕ್ಕಪಕ್ಕದ ಜನರು ಏನಾಯ್ತು ಎಂದು ಓಡೋಡಿ ಬಂದಿದ್ದು, ಗಾಯಗೊಂಡಿದ್ದ ಸವಿತಾಳನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸವಿತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಕಾಮುಕ ಮೈದುನ ಪರಾರಿಯಾಗಿದ್ದಾನೆ.

ಸವಿತಾ ತನ್ನ ಅಣ್ಣನ ಹೆಂಡತಿ ಎನ್ನುವುದನ್ನು ಮರೆತ ರಮೇಶ್, ನಿತ್ಯವೂ ಮಂಚಕ್ಕೆ ಕರೆಯುತ್ತಿದ್ದನಂತೆ. ಆದ್ರೆ, ಇದಕ್ಕೆ ಸವಿತಾ ನಿರಾಕರಿಸುತ್ತಾ ಬಂದಿದ್ದಾಳಂತೆ. ಆದ್ರೆ, ಭಾನುವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಸವಿತಾಳನ್ನು ಮತ್ತೆ ಕರೆದಿದ್ದಾನೆ. ಇದಕ್ಕೆ ಸವಿತಾ ಒಪ್ಪದಿದ್ದಾಗ ಬಲವಂತ ಮಾಡಿದ್ದು, ಈ ವೇಳೆ ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಇದರಿಂದ ಮುಖ, ಎದೆ ಭಾಗ , ಗಲ್ಲಕ್ಕೆ ಕಚ್ಚಿದ ಗಾಯಗಳಾಗಿದ್ದು, ಸದ್ಯ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

           

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow