Govinda And Sunita Divorce: ದಾಂಪತ್ಯದಲ್ಲಿ ಬಿರುಕು: 37 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಗೋವಿಂದ!?

ಫೆಬ್ರವರಿ 26, 2025 - 11:59
 0  14
Govinda And Sunita Divorce: ದಾಂಪತ್ಯದಲ್ಲಿ ಬಿರುಕು: 37 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಗೋವಿಂದ!?

90ರ ದಶಕದಲ್ಲಿ ಬಾಲಿವುಡ್​ನ ಸೂಪರ್ ಸ್ಟಾರ್ ಅಗಿ ಮಿಂಚಿದ ನಟ ಗೋವಿಂದ ಅವರ ಸುದ್ದಿಯೊಂದು ಹರಿದಾಡುತ್ತಿದೆ. ಒಂದು ಕಾಲದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದ ಗೋವಿಂದ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಗೋವಿಂದ ಈಗ ಹೆಚ್ಚು ಸಿನಿಮಾ ಮಾಡುತ್ತಿಲ್ಲ ಆದರೆ ಇನ್ನೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ನಟ-ನಟಿಯರು ಅದ್ಧೂರಿಯಾಗಿ ಬದುಕುತ್ತಿದ್ದಾರೆ. ಅವರಲ್ಲಿ ಗೋವಿಂದ ಕೂಡ ಒಬ್ಬರಾಗಿದ್ದಾರೆ.

ಇದೀಗ ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಇವರಿಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅಚ್ಚರಿ ಎಂದರೆ ಗೋವಿಂದ ಮತ್ತು ಸುನೀತಾ ಅವರು ಮದುವೆ ಆಗಿ 37 ವರ್ಷ ಕಳೆದಿದೆ. ಇಷ್ಟು ದಿನ ಅನ್ಯೋನ್ಯವಾಗಿ ಇದ್ದ ದಂಪತಿ ನಡುವೆ ಈಗ ಕಿರಿಕ್ ಶುರುವಾಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ ದಂಪತಿ ಕಡೆಯಿಂದ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸುನೀತಾ ಮತ್ತು ಗೋವಿಂದ ಅವರ ಜೀವನ ಶೈಲಿ ನಡುವೆ ಸಾಕಷ್ಟು ವ್ಯತ್ಯಾಸ ಉಂಟಾಗಿದೆ ಎನ್ನಲಾಗಿದೆ. ಹಾಗಾಗಿ ಒಂದಷ್ಟು ಸಮಯದಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ನಡುವೆ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಗೋವಿಂದ ಅವರು ಮರಾಠಿ ನಟಿಯೊಬ್ಬರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದಲೇ ಸುನೀತಾ ಅವರು ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಹರಡಿದೆ.

ಈ ಮೊದಲು ನೀಡಿದ್ದ ಒಂದು ಸಂದರ್ಶನದಲ್ಲಿ ಸುನೀತಾ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದರು. ‘ನಮಗೆ ಎರಡು ಮನೆ ಇದೆ. ನಮ್ಮ ಅಪಾರ್ಟ್​ಮೆಂಟ್​ ಎದುರು ನಮ್ಮದೇ ಒಂದು ಬಂಗಲೆ ಇದೆ. ನಾನು ಫ್ಲಾಟ್​ನಲ್ಲಿ ಮಕ್ಕಳ ಜೊತೆ ಇರುತ್ತೇನೆ. ಅವರು (ಗೋವಿಂದ) ಬಂಗಲೆಯಲ್ಲಿ ಇರುತ್ತಾರೆ. ಅವರ ಮೀಟಿಂಗ್ ಮುಗಿಯುವುದು ತಡ ಆಗುತ್ತದೆ. ಅವರಿಗೆ ಮಾತನಾಡುವುದು ಎಂದರೆ ತುಂಬ ಇಷ್ಟ. 10 ಜನರನ್ನು ಸೇರಿಸಿಕೊಂಡು ಮಾತನಾಡುತ್ತಾ ಇರುತ್ತಾರೆ’ ಎಂದು ಸುನೀತಾ ಅವರು ಹೇಳಿದ್ದರು.

ಕೆಲವು ತಿಂಗಳ ಹಿಂದೆಯೇ ಸುನೀತಾ ಅವರು ಗೋವಿಂದಗೆ ಡಿವೋರ್ಸ್​ ನೋಟಿಸ್ ಕಳಿಸಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೆ ಇನ್ನೂ ಗೋವಿಂದ ಅವರು ಪ್ರತಿಕ್ರಿಯೆ ನೀಡಿದಂತಿಲ್ಲ. ಕುಟುಂಬದವರು ನೀಡಿದ ಕೆಲವು ಹೇಳಿಕೆಯಿಂದ ಸುನೀತಾ ಮತ್ತು ಗೋವಿಂದ ನಡುವೆ ಸಮಸ್ಯೆ ಉಂಟಾಗಿರುವುದು ನಿಜ ಎಂದು ಅವರ ಆಪ್ತ ಮೂಲಗಳು ಹೇಳಿರುವುದಾಗಿ ವರದಿ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow