ಹಬ್ಬಕ್ಕೂ ಮುನ್ನ ದೇಶದ ಜನತೆಗೆ ಶಾಕ್! ಇಂದಿನಿಂದ LPG ಸಿಲಿಂಡರ್ ಬೆಲೆ ಭಾರೀ ಏರಿಕೆ!

ಅಕ್ಟೋಬರ್ 1, 2024 - 18:03
 0  38
ಹಬ್ಬಕ್ಕೂ ಮುನ್ನ ದೇಶದ ಜನತೆಗೆ ಶಾಕ್! ಇಂದಿನಿಂದ LPG ಸಿಲಿಂಡರ್ ಬೆಲೆ ಭಾರೀ ಏರಿಕೆ!

 

ಬೆಂಗಳೂರು:  LPG ಗ್ಯಾಸ್ ಸಿಲಿಂಡರ್‌ ಬೆಲೆಗಳು ಅಕ್ಟೋಬರ್ 1, 2024 ರಿಂದ ಹೆಚ್ಚಾಗಿದೆ. ಹೌದು ದಸರಾ, ದೀಪಾವಳಿ ಸಂಭ್ರಮದಲ್ಲಿದ್ದ ಜನರಿಗೆ ಸಿಲಿಂಡರ್ ದರ ಮತ್ತೆ ಏರಿಕೆ ಕಾಣುವ ಮೂಲಕ ಬಳಕೆದಾರರಿಗೆ ಸಂಕಟ ಮರುಕವಾಗಿದೆ. ತಿಂಗಳ ಮೊದಲ ದಿನವೇ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿತಾಗಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐಓಸಿಎಲ್ ವೆಬ್‌ಸೈಟ್ ಪ್ರಕಾರ, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ನ ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗಲಿವೆ.

ಆದರೆ ಬೆಲೆಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗಿರುತ್ತವೆ. ದೆಹಲಿಯಿಂದ ಮುಂಬೈನವರೆಗೂ ಬೆಲೆಗಳು ಭಿನ್ನವಾಗಿರುತ್ತವೆ. ಮುಂಬೈನಲ್ಲಿ 1,644 ರೂ. ಇದ್ದ 19 ಕೆಜಿ ಸಿಲಿಂಡರ್ ಬೆಲೆ ಇದೀಗ 1,692.50 ರೂ. ಆಗಿದೆ. ಸೆಪ್ಟೆಂಬರ್‌ನಲ್ಲಿ 39 ರೂ.ಗಳಷ್ಟು ಏರಿಕೆಯಾಗಿತ್ತು.

ಕೋಲ್ಕತ್ತಾದಲ್ಲಿ ಇದರ ಬೆಲೆ 1,802.50 ರೂ.ನಿಂದ 1,850.50 ರೂ.ಆಗಿದೆ. ಚೆನ್ನೈನಲ್ಲಿ 1,855 ರೂ.ಯಿದ್ದ 19 ಕೆಜಿ ಸಿಲಿಂಡರ್ ಬೆಲೆ 1,903 ರೂ. ಆಗಿದೆ. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 48 ರೂ. ಏರಿಕೆಯಾಗಿದೆ. ಸದ್ಯ 19 ಕೆಜಿ ಸಿಲಿಂಡರ್ ಬೆಲೆ 1,818 ರೂ. ಆಗಿದೆ. 

ಸೆಪ್ಟೆಂಬರ್ 1, 2024 ರಂದು ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1691 ರೂ, ಕೋಲ್ಕತ್ತಾದಲ್ಲಿ 1802 ರೂ, ಮುಂಬೈನಲ್ಲಿ 1644 ರೂ ಮತ್ತು ಚೆನ್ನೈನಲ್ಲಿ 1855 ರೂ. ಆಗಸ್ಟ್‌ನಲ್ಲಿ ದೆಹಲಿಯಲ್ಲಿ 1652.50 ರೂ., ಕೋಲ್ಕತ್ತಾದಲ್ಲಿ 1764.50 ರೂ., ಮುಂಬೈನಲ್ಲಿ 1605 ರೂ. ಮತ್ತು ಚೆನ್ನೈನಲ್ಲಿ 1817 ರೂ.ಆಗಿತ್ತು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow