ಪ್ರಾಣಿ ಪ್ರಿಯರೇ ಎಚ್ಚರ.. ಬೆಕ್ಕುಗಳಿಗೆ ಹರಡುತ್ತಿದೆ ಮರಣಾಂತಿಕ ವೈರಸ್ ಸೋಂಕು..!

ರಾಯಚೂರು: ನಾಯಿಗಳು ಮನುಷ್ಯನ ಬೆಸ್ಟ್ ಫ್ರೆಂಡ್ ಎನ್ನಲಾಗುತ್ತದೆ. ಹಾಗಾಗಿ ಅವುಗಳನ್ನ ಎಲ್ಲರೂ ಇಷ್ಟಪಡುತ್ತಾರೆ ಹಾಗೂ ಸಾಕುತ್ತಾರೆ. ಆದರೆ ಬೆಕ್ಕುಗಳನ್ನ ಸಹ ಅನೇಕ ಜನರು ಸಾಕುತ್ತಾರೆ. ಆದ್ರೆ ಇನ್ನುಂದೆ ಸಾಕಬೇಕೆಂದ್ರೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕಂದ್ರೆ ರಾಯಚೂರು ಜಿಲ್ಲೆಯಲ್ಲಿ ಎಫ್ಪಿವಿ ವೈರಸ್ ನಿಂದ ಬೆಕ್ಕುಗಳು ಸಾವನ್ನಪ್ಪುತ್ತಿವೆ ಬೆಕ್ಕುಗಳು. ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಾಣು ಪತ್ತೆಯಾಗಿದೆ.
ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೋಂಕು ತಗುಲಿದೆ 100 ಬೆಕ್ಕುಗಳಲ್ಲಿ 99 ಸಾವನ್ನಪ್ಪುವ ಸಾಧ್ಯತೆ ಇದೆ.
ಅತಿ ವೇಗದಲ್ಲಿ ಹರಡುತ್ತೆ ಎಫ್ಪಿವಿ ವೈರಸ್
ಒಂದು ಕಡೆ 10 ಬೆಕ್ಕುಗಳಿದ್ದರೆ, ಆ ಪೈಕಿ ಒಂದು ಬೆಕ್ಕಿಗೆ ವೈರಸ್ ಸೋಂಕು ತಗಲಿದರೆ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ಎಲ್ಲಾ ಬೆಕ್ಕುಗಳಿಗೂ ವೈರಸ್ ಹರಡುತ್ತದೆ. ಇದರಿಂದಾಗಿ ಬೆಕ್ಕು ಸಾಕಾಣಿಕೆ ಮಾಡುವವರಿಗೆಬೆ, ಕ್ಕುಗಳನ್ನು ಹೊಂದಿರುವವರಿಗೆ ಆತಂಕ ಉಂಟಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






