ಮ್ಯಾಕ್ಸ್ ಮೂವಿಯ ಟ್ರೈಲರ್ ರಿಲೀಸ್: ಚಿತ್ರದುರ್ಗದಲ್ಲಿ ಹೇಗಿತ್ತು ಗೊತ್ತಾ ಸುದೀಪ್ ಎಂಟ್ರಿ..?

ಚಿತ್ರದುರ್ಗ:- ಕೋಟೆನಾಡು ಚಿತ್ರದುರ್ಗದಲ್ಲಿ ಕಿಚ್ಚನ ಮ್ಯಾಕ್ಸ್ ಮೂವಿ ಟ್ರೈಲರ್ ರಿಲೀಸ್ ಆಗಿದ್ದು, ಸುದೀಪ್ ಎಂಟ್ರಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಡೈಲಾಗ್, ಆ್ಯಕ್ಷನ್ ಎಲ್ಲವೂ ಟ್ರೈಲರ್ನಲ್ಲಿ ಚೆನ್ನಾಗಿ ಮೂಡಿ ಬಂದಿವೆ. ಮ್ಯಾಕ್ಸ್ ಹತ್ತಿರ ಮಾತನಾಡುತ್ತಿದ್ದೀರಾ, ಮ್ಯಾಕ್ಸಿಮಮ್ ಸೈಲೆನ್ಸ್ ಇರಲಿ ಎನ್ನುವ ಕಿಚ್ಚನ ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗೋದು ಖಚಿತ.
ಕನ್ನಡ ಸಿನಿಮಾರಂಗ ಉಳಿಯಬೇಕು ಎಂದರೆ ಅಭಿಮಾನಿಗಳು ಸಿನಿಮಾ ನೋಡಬೇಕು. ಹೊಸಬರ ಸಿನಿಮಾಗಳನ್ನು ನೋಡಬೇಕು. ಆಗಲೇ ಸಿನಿಮಾ ರಂಗ ಎನ್ನುವುದು ಜೀವಂತವಾಗಿರುತ್ತದೆ. ಇದರ ಜೊತೆಗೆ ಸಿನಿಮಾ ಮಂದಿರಗಳು ಉಳಿಯುತ್ತವೆ. ಹೀರೋಗಳಷ್ಟೇ ಅಲ್ಲ, ಹೊಸ ನಟರ ಮೂವಿಗಳನ್ನು ಜನ ಸ್ವಾಗತ ಮಾಡಬೇಕು ಅಂತ ಕನ್ನಡ ಸಿನಿಮಾ ರಂಗ ಕುರಿತು ಸುದೀಪ್ ಮಾತನಾಡಿದರು.
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕೋಟೆನಾಡು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನಡೆಯಿತು. ನಗರದ ಸೈನ್ಸ್ ಕಾಲೇಜ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುದೀಪ್ರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ನೂಕಾಟವಾಗಿದ್ದರಿಂದ ಪೊಲಿಸರು ಲಘು ಲಾಠಿ ಪ್ರಹಾರ ಕೂಡ ಮಾಡಿದರು. ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಕಿಚ್ಚ ಸುದೀಪ್ ಫ್ಯಾನ್ಸ್ ಕಡೆಗೆ ಕೈ ಬೀಸಿದರು.
ನಿಮ್ಮ ಪ್ರತಿಕ್ರಿಯೆ ಏನು?






