ನಿರುದ್ಯೋಗಿಗಳಿಗೆ ಬಂಪರ್ ಅವಕಾಶ: ಹೈಕೋರ್ಟ್ ನಲ್ಲಿದೆ 3 ಸಾವಿರಕ್ಕೂ ಹೆಚ್ಚು ಉದ್ಯೋಗ, ಆಸಕ್ತರು ಅಪ್ಲೈ ಮಾಡಿ!

ಅಕ್ಟೋಬರ್ 5, 2024 - 08:01
 0  15
ನಿರುದ್ಯೋಗಿಗಳಿಗೆ ಬಂಪರ್ ಅವಕಾಶ: ಹೈಕೋರ್ಟ್ ನಲ್ಲಿದೆ 3 ಸಾವಿರಕ್ಕೂ ಹೆಚ್ಚು ಉದ್ಯೋಗ, ಆಸಕ್ತರು ಅಪ್ಲೈ  ಮಾಡಿ!

ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. 

ನ್ಯಾಯಾಲಯದಲ್ಲಿ ಉದ್ಯೋಗ ಮಾಡಲು ಹಲವು ವರ್ಷಗಳಿಂದ ಕಾಯುತ್ತಿರುವವರು ಇವುಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇದಕ್ಕೆ ಸಂಬಂಧಿಸಿದ ನೋಟಿಫಿಕೇಶನ್ ಈಗಾಗಲೇ ಬಿಡುಗಡೆ ಮಾಡಲಾಗಿದೆ.

2024-25 ಸಾಲಿನ ಅಲಹಾಬಾದ್ ಹೈಕೋರ್ಟ್​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳೆಲ್ಲ ಆನ್​​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಬೇರೆ ಮೂಲದಿಂದ ಬರುವ ಅಪ್ಲಿಕೇಶನ್​ಗಳನ್ನು ಕೋರ್ಟ್ ಪರಿಗಣಿಸುವುದಿಲ್ಲ. ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ III, ಪೈಡ್ ಅಪ್ರೆಂಟಿಸ್‌ ಹುದ್ದೆ, ಡ್ರೈವರ್‌, ಪ್ರೊಸೆಸ್ ಸರ್ವರ್, ಸ್ವೀಪರ್ ಕಮ್ ಫರ್ರಾಶ್, ಟ್ಯೂಬ್‌ವೆಲ್ ಆಪರೇಟರ್ ಕಮ್ ಎಲೆಕ್ಟ್ರಿಷಿಯನ್, ಪ್ಯೂನ್, ಚೌಕಿದಾರ್, ಮಾಲಿ ಸೇರಿ ಇತರೆ ಹುದ್ದೆಗಳು ಇವೆ

ಗ್ರೂಪ್ ಸಿ ಹಾಗೂ ಡಿ ಹುದ್ದೆಗಳು

ಸ್ಟೆನೋಗ್ರಾಫರ್ ಗ್ರೇಡ್ III- 583 ಹುದ್ದೆಗಳು
ಜೂನಿಯರ್ ಅಸಿಸ್ಟೆಂಟ್- 932
ಪೈಡ್ ಅಪ್ರೆಂಟಿಸ್‌ ಹುದ್ದೆ- 122
ಡ್ರೈವರ್‌- 30
ಟ್ಯೂಬ್‌ವೆಲ್ ಆಪರೇಟರ್- 1639 (ಪ್ಯೂನ್, ಚೌಕಿದಾರ್, ಮಾಲಿ ಇತರೆ)
ಒಟ್ಟು ಎಷ್ಟು ಹುದ್ದೆಗಳು..?

3,306 ಉದ್ಯೋಗಗಳು

ಮಾಸಿಕ ಸಂಬಳ ಎಷ್ಟು?

5,200 ರಿಂದ 20,000 ರೂಪಾಯಿಗಳು

ವಿದ್ಯಾರ್ಹತೆ ಏನು ಕೇಳಲಾಗಿದೆ..?

ಆಯಾಯ ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ
6ನೇ ತರಗತಿ, 10ನೇ ತರಗತಿ, ದ್ವಿತಿಯ ಪಿಯುಸಿ, ಪದವಿ
ಸ್ಟೆನೋಗ್ರಾಫರ್, ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪ್ರಮಾಣ ಪತ್ರ ಇರಬೇಕು
ಡ್ರೈವರ್​ಗೆ ಲೈಸನ್ಸ್ ಇರಬೇಕು
ಗ್ರೂಪ್​ ಡಿ ಹುದ್ದೆಗೆ 6ನೇ ತರಗತಿ

ವಯಸ್ಸಿನ ಮಿತಿ- 18 ರಿಂದ 40 ವರ್ಷಗಳು

ಅರ್ಜಿ ಶುಲ್ಕ-

ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ
ಜನರಲ್, ಇಡಬ್ಲುಎಸ್​, ಒಬಿಸಿ- 800 ರಿಂದ 950 ರೂಗಳು
ಎಸ್​​ಸಿ, ಎಸ್​​ಟಿ, ಪಿಡಬ್ಲುಡಿ- 600 ರಿಂದ 750 ರೂ.ಗಳು
ಆನ್​ಲೈನ್​ ಮೂಲಕ ಹಣ ಪಾವತಿ ಮಾಡಬೇಕು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ (ಸ್ಕಿಲ್ ಟೆಸ್ಟ್)
ವೈದ್ಯಕೀಯ ಪರೀಕ್ಷೆ
ದಾಖಲೆ ಪರಿಶೀಲನೆ

ಅಕ್ಟೋಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow