ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಬಿಗ್ ಮನೆಯಿಂದ ಹೊರ ಬಂದಿದ್ಯಾಕೆ? ನಟಿ ಕೊಟ್ಟ ಉತ್ತರ ಹೀಗಿದೆ!

ಬಿಗ್ ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಶೋಭಾ ಶೆಟ್ಟಿ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದರು. ಮೊದಲ ವಾರ ಆರ್ಭಟಿಸಿದ್ದ ಶೋಭಾ ನಂತರದ ದಿನಗಳಲ್ಲಿ ತುಂಬಾ ಡಲ್ ಆದರು. ಅಲ್ಲದೇ ಬಿಗ್ ಮನೆಯಿಂದ ಹೊರ ಹೋಗಲು ನಿರ್ಧಾರ ಮಾಡಿದ್ದರು.
ಆದರ ಅವರ ದಿಢೀರ್ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಶೋಭಾ ಅವರ ವರ್ತನೆಗೆ ಸುದೀಪ್ ಅವರು ಗರಂ ಆಗಿ, ನಿಮ್ಮ ನಡವಳಿಕೆ ತುಂಬ ಡ್ರಾಮ ಅಂತ ಅನ್ನಿಸುತ್ತಿದೆ. ನಿಮಗೆ ಆರೋಗ್ಯ ಸರಿಯಿಲ್ಲ ಅಂತಾದರೆ ಹೋಗಬಹುದು. ಮತ್ತೆ ಇರ್ತೀನಿ ಅಂತ ಡ್ರಾಮ ಮಾಡಬೇಡಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಶೋಭಾ ಶೆಟ್ಟಿ ಅವರನ್ನು ಮನೆಯಿಂದ ಹೊರಗೆ ಕಳುಹಿಸುತ್ತೇವೆ ಎಂದಿದ್ದರು.
ಬಳಿಕ ಶೋಭಾ ಅವರು ಶೋ ಕ್ವಿಟ್ ಮಾಡಿ ಹೊರ ನಡೆದರು. ಅನಾರೋಗ್ಯದ ಹಿನ್ನೆಲೆ ಅವರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ದೊಡ್ಮನೆಯಿಂದ ಎಲಿಮಿನೇಟ್ ಆಗ್ತಿದ್ದಂತೆ ನಟಿ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಯ ಬೆಡ್ ಮೇಲಿಂದಲೇ ಫ್ಯಾನ್ಸ್‌ಗೆ ನಟಿ ಸಂದೇಶ ಕೊಟ್ಟಿದ್ದರು.
ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದರು. ಇದೀಗ ಮತ್ತೆ ಶೋಭಾ ಶೆಟ್ಟಿ ಅವರು ತಮ್ಮ ಯುಟ್ಯೂಬ್ ಚಾನಲ್ ಮೂಲಕ ಅಸಲಿ ಕಾರಣ ರಿವೀಲ್ ಮಾಡಿದ್ದಾರೆ.
ನನಗೆ ಇನ್‌ಫೆಕ್ಷನ್ ಪ್ರಾಬ್ಮಂ ಇತ್ತು. ಇನ್ನು ಬಿಗ್ ಬಾಸ್ ಕೂಡ ಅದಕ್ಕೆ ಟ್ರೀಟ್‌ಮೆಂಟ್ ಕೂಡ ಕೊಟ್ಟಿದ್ದರು. ಆದರೆ ಅಲ್ಲಿ ನನಗೆ ಫುಡ್ ಅದೆಲ್ಲ ಸೆಟ್ ಆಗಿಲ್ಲ. ಅವರನ್ನ ಬ್ಲೇಮ್ ಮಾಡ್ತಿಲ್ಲ. ಅಲ್ಲಿ ಟೇಕ್ ಕೇರ್ ತುಂಬ ಇತ್ತು. ನಿಮಗೂ ನನ್ನ ಮೇಲೆ ಒಳ್ಳೆಯ ಅಭಿಪ್ರಾಯ ಇತ್ತು ಅಂತ ಗೊತ್ತು. ಆದರೆ ನನಗೆ ಆರೋಗ್ಯ ಸಪೋರ್ಟ್ ಮಾಡಿಲ್ಲ ಎಂದಿದ್ದಾರೆ
ನನಗೆ ವೋಟಿಂಗ್ ಕೂಡ ಬಂದಿತ್ತು. ಆದರೆ ಆರೋಗ್ಯ ಕೂಡ ತುಂಬ ಮುಖ್ಯ ಆಗುತ್ತೆ. ಹಾಗೇ ಕೆಲಸದ ಮೇಲೆ ನನಗೆ ತುಂಬ ಗೌರವ ಇದೆ ಎಂದಿದ್ದಾರೆ. ನನಗೆ ಓವರ್ ಕಮ್ ಆಗೋಕೆ ಇಷ್ಟು ದಿನ ಬೇಕಾಯ್ತು. ಕಮೆಂಟ್‌ನಲ್ಲಿ ಪಾಸಿಟಿವ್, ನೆಗೆಟಿವ್ ಇರುತ್ತೆ. ಕನ್ನಡ ಪ್ರಾಜೆಕ್ಟ್ ಮೂಲಕ ನಾನು ನಿಮ್ಮನ್ನು ರಂಜಿಸುತ್ತೇನೆ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






