Byrathi Basavaraj: ರೌಡಿಶೀಟರ್ ಬಿಕ್ಲು ಶಿವ ಹ*ತ್ಯೆ ಕೇಸ್: ಮಾಜಿ ಸಚಿವ ಭೈರತಿ ಬಸವರಾಜ್ ವಿರುದ್ಧ FIR!

ಜುಲೈ 16, 2025 - 10:46
 0  14
Byrathi Basavaraj: ರೌಡಿಶೀಟರ್ ಬಿಕ್ಲು ಶಿವ ಹ*ತ್ಯೆ ಕೇಸ್: ಮಾಜಿ ಸಚಿವ ಭೈರತಿ ಬಸವರಾಜ್ ವಿರುದ್ಧ FIR!

ಬೆಂಗಳೂರು: ಭಾರತಿನಗರದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಕೆಆರ್ ಪುರಂನ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಹೆಸರು ತಳಕು ಹಾಕಿಕೊಂಡಿದೆ. ಶಿವಪ್ರಕಾಶ್ ಅವರ ತಾಯಿ ವಿಜಯಲಕ್ಷ್ಮಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕುರಿತು ಪ್ರಕರಣ ಕೂಡ ದಾಖಲಾಗಿದೆ. ಹತ್ಯೆ ಪ್ರಕರಣದಲ್ಲಿ ಜಗದೀಶ್ (1), ಕಿರಣ್ (2), ವಿಮಲ್ (3), ಅನಿಲ್ (4) ಹಾಗೂ ಶಾಸಕರಾದ ಬೈರತಿ ಬಸವರಾಜ್ (5) ಆರೋಪಿಗಳಾಗಿ ನಮೂದಾಗಿದ್ದಾರೆ.

ದೂರು ಪ್ರಕಾರ, ಕಿತ್ತಗನೂರು ಪ್ರದೇಶದಲ್ಲಿನ ಜಾಗದ ವಿಚಾರವಾಗಿ ಕೊಲೆ ನಡೆದಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ 8–9 ಮಂದಿ ದುಷ್ಕರ್ಮಿಗಳು ಮಚ್ಚುಗಳಿಂದ ಹಲ್ಲೆ ನಡೆಸಿ ಶಿವಪ್ರಕಾಶ್ ಅವರನ್ನು ಹತ್ಯೆ ಮಾಡಿದ್ದಾರೆ.

ಶಿವಪ್ರಕಾಶ್ ಅವರ ತಾಯಿ ವಿಜಯಲಕ್ಷ್ಮಿಯವರು, ತಮ್ಮ ಮಗನಿಗೆ ಹಲವು ಬಾರಿ ಜೀವ ಬೆದರಿಕೆ ಬಂದಿತ್ತು ಎಂದು ತಿಳಿಸಿದ್ದಾರೆ. ಫೆಬ್ರವರಿ 21ರಂದು ಕೂಡಾ ಅವರು ಭಾರತಿನಗರ ಠಾಣೆಯಲ್ಲಿ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಜಾಗ ಮಾರಾಟಕ್ಕೆ ಒತ್ತಾಯ, ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೂಡ ಇದೆ. ಕುರಿತು ಪೊಲೀಸ್ ತನಿಖೆ ಮುಂದುವರಿದಿದ್ದು, ಇನ್ನಷ್ಟು ವಿವರಗಳು ನಿರೀಕ್ಷಿಸಲಾಗಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow