ಮೊಬೈಲ್ ಬಗ್ಗೆ ಜಾಗೃತಿ ಮೂಡಿಸಲು ಹೋಗಿ ಟೀಕೆಗೆ ಗುರಿಯಾದ ಶಿಕ್ಷಕಿ: ಕ್ಷಮೆ ಕೇಳಿ ಬೇಸರ ಹೊರಹಾಕಿದ ವಂದನಾ ರೈ!

ಜುಲೈ 16, 2025 - 21:17
 0  41
ಮೊಬೈಲ್ ಬಗ್ಗೆ ಜಾಗೃತಿ ಮೂಡಿಸಲು ಹೋಗಿ ಟೀಕೆಗೆ ಗುರಿಯಾದ ಶಿಕ್ಷಕಿ: ಕ್ಷಮೆ ಕೇಳಿ ಬೇಸರ ಹೊರಹಾಕಿದ ವಂದನಾ ರೈ!

ಉಡುಪಿ:- ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗಿದೆ ಎಂದು ಬಾಲಕಿಯ ಕಣ್ಣಿಗೆ ಅಂಧರಂತೆ ಬಟ್ಟೆ ಕಟ್ಟಿಕೊಂಡು ಬಂದು ಶಾಲೆಯೊಂದರಲ್ಲಿ ಜಾಗೃತಿ ಮೂಡಿಸಿದ್ದ ವಂದನಾ ರೈ ಟೀಚರ್ ಇದೀಗ ಕ್ಷಮೆಯನ್ನೂ ಕೇಳಿದ್ದಾರೆ.

ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗುವ ಬಗ್ಗೆ ವಂದನಾ ರೈ ಟೀಚರ್ ಮಾಡಿದ್ದ ವಿಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ವಿಡಿಯೋವನ್ನು ಡಿಲೀಟ್ ಮಾಡಿದ್ದು, ಅವರ ಮುಂದಿನ ಹೇಳಿಕೆ ದಾಖಲಿಸಿದ್ದಾರೆ.

ಡ್ಯಾನ್ಸ್ ಟೀಚರ್ ಎಂದೇ ಫೇಮಸ್ ಆಗಿದ್ದ ಕಾರ್ಕಳ ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕಿ ವಂದನಾ ರೈ ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳನ್ನು ಮೊಬೈಲ್‌ ಎಡಿಕ್ಷನ್​ನಿಂದ ಹೇಗಾದರೂ ದೂರ ಮಾಡಬೇಕೆನ್ನುವ ಸದುದ್ದೇಶದಿಂದ ಶಾಲೆಯಲ್ಲಿ ಒಂದು ಸಣ್ಣ ಸ್ಕಿಟ್ ಮಾಡಿದ್ದರು. ವಿದ್ಯಾರ್ಥಿನಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮೊಬೈಲ್ ನೋಡಿ ನೋಡಿ ಈ ಬಾಲಕಿಯ ಕಣ್ಣು ಹೇಗೆ ಹೋಗಿದೆ ನೋಡಿ ಅಂತ ಉಳಿದ ಮಕ್ಕಳಲ್ಲಿ ಭಯದ ಮೂಲಕವಾದ್ರೂ‌ ಮೊಬೈಲ್‌ ಎಡಿಕ್ಷನ್ ‌ನಿಂದ ತಮ್ಮ ವಿದ್ಯಾರ್ಥಿಗಳನ್ನು ದೂರವಿಡಲು ತರಗತಿಯಲ್ಲಿ ಮಾಡಿದ ಜಾಗೃತಿ ವೀಡಿಯೋಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.

ಈ ಆಕ್ರೋಶದ ಬೆನ್ನಲ್ಲೇ ಶಿಕ್ಷಕಿ ವಂದನಾ ರೈ ವೀಡಿಯೋ ಡಿಲಿಟ್ ಮಾಡುವ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ.‌ ಕ್ಷಮೆ ಕೇಳಿದ ವಂದನಾ ರೈ ಪರ ಹಲವರು‌ ಶ್ಲಾಘನೀಯ ಕಮೆಂಟ್ ಕೂಡ ಮಾಡಿದ್ದಾರೆ. ವಂದನಾ ರೈ ತಮ್ಮ ಜಾಗೃತಿ ವೀಡಿಯೋ ಬಗ್ಗೆ ಕ್ಷಮೆ ಕೇಳುವುದರ ಜೊತೆ ತಾನು ಮಾಡಿದ ವೀಡಿಯೋ ತಲುಪುವವರಿಗೆ ತಲುಪಿದೆ. ನಾನು ಇರೋದೇ ಮಕ್ಕಳಿಗಾಗಿ ಎಂದು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬೇಸರ ಹೊರಹಾಕಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow