ಮಹಾರಾಜ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್’ಗೆ ಜಾಕ್ಪಾಟ್: ಇತಿಹಾಸದಲ್ಲೇ Highest ಬಿಡ್!

ಜುಲೈ 17, 2025 - 09:04
 0  14
ಮಹಾರಾಜ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್’ಗೆ ಜಾಕ್ಪಾಟ್: ಇತಿಹಾಸದಲ್ಲೇ Highest ಬಿಡ್!

ಬೆಂಗಳೂರು: ಗಾಯದಿಂದ ಕೆಲಕಾಲ ಕ್ರೀಡಾಂಗಣದ ಹೊರಗಿದ್ದ ಕನ್ನಡಿಗ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರು ಇದೀಗ ಬ್ಯಾಕ್ ಆಗಿದ್ದಾರೆ! ಐಪಿಎಲ್ನಲ್ಲಿ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದ ದೇವದತ್, ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟಗೊಂಡು ದೊಡ್ಡ ಸುದ್ದಿಯಾಗಿದ್ದಾರೆ.

13.20 ಲಕ್ಷ ರೂ.! ಇತಿಹಾಸದ ಅತ್ಯುಚ್ಚ ಮೊತ್ತದ ಖರೀದಿ
ಹುಬ್ಬಳ್ಳಿ ಟೈಗರ್ಸ್ ತಂಡವು ಪಡಿಕ್ಕಲ್ಗೆ 13.20 ಲಕ್ಷ ರೂಪಾಯಿ ನೀಡಿದ್ದು, ಇದು ಮಹಾರಾಜ ಟ್ರೋಫಿಯ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುಂಚೆ ಅವರು ಐಪಿಎಲ್ನಲ್ಲಿ ಆರ್ಸಿಬಿ ತಂಡದಿಂದ 3.20 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು.

ಮತ್ತೊಬ್ಬ ಸ್ಟಾರ್ ಆಟಗಾರ ಮನೀಶ್ ಪಾಂಡೆ
ಪರೀಕ್ಷಿತ ಕನ್ನಡಿಗ ಮನೀಶ್ ಪಾಂಡೆ ಅವರು ಮೈಸೂರು ವಾರಿಯರ್ಸ್ ತಂಡದಿಂದ 12.20 ಲಕ್ಷ ರೂಪಾಯಿಗೆ ಖರೀದಿಯಾಗಿದ್ದು, ನ್ಯೂ ಜೆನರೇಷನ್ ಆಟಗಾರರಿಗೆ ಟಫ್ಟ್ ಕೊಡಲು ಸಜ್ಜಾಗಿದ್ದಾರೆ. ಜೊತೆಗೆ ಅಭಿನವ್ ಮನೋಹರ್ ಕೂಡ ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿ 12.20 ಲಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಆಟಗಾರರ ಶ್ರೇಣಿಯಲ್ಲಿ ಹೆಚ್ಚು ಹೆಸರಾಗುತ್ತಿರುವ ಪಡಿಕ್ಕಲ್, ಬಾರಿ ಆತನ ಪ್ರದರ್ಶನದಿಂದ ರಾಜ್ಯ ಮಟ್ಟದ ಟೂರ್ನಿಯಲ್ಲಿ ತೀವ್ರ ಕುತೂಹಲ ಮೂಡಿದೆ. ಮಹಾರಾಜ ಟ್ರೋಫಿಯಲ್ಲಿ ಬಾರಿ ಪ್ರತಿ ತಂಡದಲ್ಲಿ ಇಬ್ಬರು ಸ್ಥಳೀಯ ಆಟಗಾರರನ್ನು ಇರಿಸಿಕೊಳ್ಳುವ ನಿಯಮ ಜಾರಿಯಲ್ಲಿದ್ದು, ಸ್ಥಳೀಯ ಪ್ರತಿಭೆಗಳಿಗೆ ಸಾಕಷ್ಟು ಅವಕಾಶ ಸಿಕ್ಕಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow