Ravichandran Ashwin: IPL ಗೆ ರವಿಚಂದ್ರನ್ ಅಶ್ವಿನ್ ಗುಡ್ ಬೈ: ಸ್ಟಾರ್ ಆಫ್ ಸ್ಪಿನ್ನರ್ ಹೇಳಿದ್ದೇನು?

ಆಗಸ್ಟ್ 27, 2025 - 14:35
 0  15
Ravichandran Ashwin: IPL ಗೆ ರವಿಚಂದ್ರನ್ ಅಶ್ವಿನ್ ಗುಡ್ ಬೈ: ಸ್ಟಾರ್ ಆಫ್ ಸ್ಪಿನ್ನರ್ ಹೇಳಿದ್ದೇನು?

ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್‌ (IPL) ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅವರು, ಐಪಿಎಲ್ ಮೂಲಕ ಮಾತ್ರ ಕಣಕ್ಕಿಳಿಯುತ್ತಿದ್ದರು. ಇದೀಗ ಸಂಪೂರ್ಣ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ.

ಅಶ್ವಿನ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹೊರಡಿಸಿ, "ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭ ಇರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಕೊನೆಗೊಂಡಿದೆ. ಆದರೆ ಲೀಗ್‌ಗಳ ಸುತ್ತಲಿನ ಆಟವನ್ನು ಅನ್ವೇಷಿಸಲು ಇದು ಹೊಸ ಆರಂಭ" ಎಂದು ತಿಳಿಸಿದ್ದಾರೆ. ಅಲ್ಲದೆ, ಇದುವರೆಗೆ ಬೆಂಬಲ ನೀಡಿದ ಎಲ್ಲಾ ಫ್ರಾಂಚೈಸಿಗಳು, ಐಪಿಎಲ್ ಹಾಗೂ ಬಿಸಿಸಿಐಗೆ ಧನ್ಯವಾದ ಅರ್ಪಿಸಿದ್ದಾರೆ.

ಐಪಿಎಲ್ ಅಂಕಿಅಂಶಗಳು:

  • ಆರಂಭ: 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ

  • ಪ್ರತಿನಿಧಿಸಿದ ತಂಡಗಳು: ಸಿಎಸ್‌ಕೆ, ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್

  • ಆಟಗಳು: 221 ಪಂದ್ಯ

  • ಬೌಲಿಂಗ್: 4710 ಎಸೆತ – 187 ವಿಕೆಟ್

  • ಬ್ಯಾಟಿಂಗ್: 833 ರನ್

ಕಳೆದ ಸೀಸನ್‌ ಅವರು ಸಿಎಸ್‌ಕೆ ಪರ ಆಡಿದ್ದರು. 9 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದರು. 17 ವರ್ಷಗಳ ಕಾಲ ಐಪಿಎಲ್ ಕಣ ರಂಗಿನಿಗೊಳಿಸಿದ ಅಶ್ವಿನ್, ಇದೀಗ ಸಂಪೂರ್ಣ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow