IPL 2026 ಫೈನಲ್‌ʼನಲ್ಲಿ RCBಗೆ ಸೋಲುವುದು ಗ್ಯಾರಂಟಿ.! ಅಂಬಾಟಿ ರಾಯುಡು ಭವಿಷ್ಯ

ಆಗಸ್ಟ್ 20, 2025 - 09:07
 0  26
IPL 2026 ಫೈನಲ್‌ʼನಲ್ಲಿ RCBಗೆ ಸೋಲುವುದು ಗ್ಯಾರಂಟಿ.! ಅಂಬಾಟಿ ರಾಯುಡು ಭವಿಷ್ಯ
IPL 2026 ಫೈನಲ್‌ʼನಲ್ಲಿ RCBಗೆ ಸೋಲುವುದು ಗ್ಯಾರಂಟಿ.! ಅಂಬಾಟಿ ರಾಯುಡು ಭವಿಷ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸದಾ ಟೀಕೆ ಮಾಡುವ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಾಟಿ ರಾಯುಡು, ಮತ್ತೊಮ್ಮೆ ಹೊಸ ಭವಿಷ್ಯ ನುಡಿದ್ದಾರೆ. ಈ ಬಾರಿ ಅವರು ಮುಂಬರುವ ಐಪಿಎಲ್ 2026ರ ಫೈನಲ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರಮುಖ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ರಾಯುಡು, ಮುಂದಿನ ಸೀಸನ್‌ನಲ್ಲಿ ಪ್ಲೇಆಫ್‌ಗೆ ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

 ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಆರ್‌ಸಿಬಿ ಸೋಲುತ್ತದೆ. ಅಂತಿಮವಾಗಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಈ ಹೇಳಿಕೆಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಸೀಸನ್‌ಲ್ಲೂ ರಾಯುಡು, ಆರ್‌ಸಿಬಿ ಗೆಲುವಿಗೆ ಅವಕಾಶವಿಲ್ಲ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು. 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow