IND vs PAK: ಟಾಸ್ ಸೋತ ಟೀಮ್ ಇಂಡಿಯಾ: ಪಾಕ್ 2ನೇ ವಿಕೆಟ್ ಪತನ
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನ ಆರನೇ ಪಂದ್ಯದಲ್ಲಿ ಟಾಸ್ ಪಾಕಿಸ್ತಾನ ಪಾಲಾಗಿದೆ. ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇದರೊಂದಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲಿದೆ. ಹಾಲಿ ಚಾಂಪಿಯನ್ ಭಾರತ ತಂಡ ಮತ್ತೊಮ್ಮೆ ಟ್ರೋಫಿ ಕಣ್ಣಲ್ಲಿ ಇಟ್ಟು ಕಣಕ್ಕಿಳಿದಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಈಗಾಗಲೇ ತಲಾ ಒಂದೊಂದು ಪಂದ್ಯ ಗೆದ್ದುಕೊಂಡಿರುವ ಎರಡು ತಂಡಗಳು ಈ ಹೈ ವೋಲ್ಟೇಜ್ ಮ್ಯಾಚ್‌ನಲ್ಲಿ ಮತ್ತೊಂದು ಗೆಲುವಿನತ್ತ ಕಣ್ಣೊಡ್ಡಿವೆ.
ಭಾರತದ ಪರವಾಗಿ ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಬದಲಿಗೆ ಗಿಲ್‌ಗೆ ಸ್ಲಾಟ್ ಸಿಕ್ಕಂತೆ ಕಾಣುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಂಡದ ಭರವಸೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಆಲ್‌ರೌಂಡರ್‌ಗಳಾಗಿ ತಂಡದ ಶಕ್ತಿ ಹೆಚ್ಚಿಸಿದ್ದಾರೆ.
ಸ್ಯಾಮ್ ಅಯ್ಯೂಬ್ ಸತತ ಎರಡು ಪಂದ್ಯಗಳಲ್ಲಿ ಗೋಲ್ಡನ್ ಡಕ್ ಆಗಿ ಔಟಾದರು. ಓಮನ್ ವಿರುದ್ಧದ ಮೊದಲ ಎಸೆತದಲ್ಲೇ ಸೊನ್ನೆಗೆ ಔಟಾಗಿದ್ದ ಅವರು ಈ ಬಾರಿಯೂ ಮೊದಲ ಎಸೆತದಲ್ಲೇ ಔಟಾದರು.
ನಿಮ್ಮ ಪ್ರತಿಕ್ರಿಯೆ ಏನು?