Neeraj Chopra: ಇಂದು ಬೆಂಗಳೂರಲ್ಲಿ ಜಾವೆಲಿನ್ ಹಬ್ಬ: ಈ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ, ಪಾರ್ಕಿಂಗ್ ನಿಷೇಧ!

ಜುಲೈ 5, 2025 - 09:05
 0  9
Neeraj Chopra: ಇಂದು ಬೆಂಗಳೂರಲ್ಲಿ ಜಾವೆಲಿನ್ ಹಬ್ಬ: ಈ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ, ಪಾರ್ಕಿಂಗ್ ನಿಷೇಧ!

 

ದೇಶದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಜಾವೆಲಿನ್ ಸ್ಪರ್ಧೆ, 'ನೀರಜ್ ಚೋಪ್ರಾ ಕ್ಲಾಸಿಕ್ 2025' ನಮ್ಮದೇ ಕಂಠೀರವ ಕ್ರೀಡಾಂಗಣದಲ್ಲಿ ಇಂದು  ನಡೆಯಲಿದೆ. ಇದು ಕೇವಲ ಒಂದು ಕ್ರೀಡಾಕೂಟವಲ್ಲ,

 ಭಾರತೀಯ ಕ್ರೀಡೆಯ ಭವಿಷ್ಯವನ್ನೇ ಬದಲಿಸಬಲ್ಲ ಒಂದು ದೊಡ್ಡ ಹೆಜ್ಜೆ. ನಮ್ಮ ಹೆಮ್ಮೆಯ ಚಿನ್ನದ ಹುಡುಗ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು JSW ಸ್ಪೋರ್ಟ್ಸ್ ಜೊತೆಗೂಡಿ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ.

 ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (AFI) ಕೂಡ ಇದಕ್ಕೆ ಮಾನ್ಯತೆ ನೀಡಿದೆ. ಅಷ್ಟೇ ಅಲ್ಲ, ವಿಶ್ವ ಅಥ್ಲೆಟಿಕ್ಸ್ 'ಗೋಲ್ಡ್ ಲೆವೆಲ್' ಮಾನ್ಯತೆ ಪಡೆದಿರುವುದು ಸ್ಪರ್ಧೆಯ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಾರ್ಯಕ್ರಮದಲ್ಲಿ ಗಣ್ಯರು ಸೇರಿದಂತೆ ಸುಮಾರು 15 ರಿಂದ 16 ಸಾವಿರ ಮಂದಿ ಸಾರ್ವಜನಿಕರು ಭಾಗವಹಿಸುತ್ತಾರೆ.

ಹೀಗಾಗಿ, ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಜೆ 4ರಿಂದ ರಾತ್ರಿ 10 ತನಕ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ. ವೇಳೆ ಕ್ರೀಡಾಂಗಣದ ಸುತ್ತ ರಸ್ತೆಯಲ್ಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ.

ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳು

  • ಸೆಂಟ್ ಜೋಸೆಫ್ಕಾಲೇಜ್ (ಕಾರ್ಯಕ್ರಮದವೀಕ್ಷಣೆಗೆಬರುವಮತ್ತುಪಾಸ್ಹೊಂದಿರುವವಾಹನಗಳಿಗೆಪಾರ್ಕಿಂಗ್)
  • ಯುಬಿಸಿಟಿ ಮಾಲ್ ಪಾರ್ಕಿಂಗ್ (ಪೇ ಅಂಡ್ ಪಾರ್ಕಿಂಗ್)
  • ಕಿಂಗ್ ವೇ/ ಲೇನ್ (ಪೇ ಅಂಡ್ ಪಾರ್ಕಿಂಗ್).

ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು :

  • ಕೆಬಿ ರಸ್ತೆ
  • ವಿಠಲ್ ಮಲ್ಯ ರಸ್ತೆ
  • ರ್.ರ್.ಎಂ.ಆರ್ ರಸ್ತೆ
  • ಕೆಜಿ ರಸ್ತೆ
  • ದೇವಾಂಗ ರಸ್ತೆ
  • ಎನ್.ಆರ್. ರಸ್ತೆ
  • ನೃಪತುಂಗ ರಸ್ತೆ
  • ಶೇಷಾದ್ರಿ ರಸ್ತೆ
  • ಅಂಬೇಡ್ಕರ್ ವೀದಿ (ಎರಡು ಬದಿ)

ಪರ್ಯಾಯ ಮಾರ್ಗ

ಹೆಚ್.ಎಲ್.ಡಿ ಜಂಕ್ಷನ್ ನಿಂದ ಕೆಬಿ ರಸ್ತೆಯ ಮುಖಾಂತರ ಕ್ರೀನ್ಸ್ ಜಂಕ್ಷನ್ ಮತ್ತಯ ಶಾಂತಿನಗರ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಹೆಚ್.ಎಲ್.ಡಿ ಜಂಕ್ಷನ್ ಬಳಿ ಬಲತಿರುವು ಪಡೆದು ಹಡ್ನನ್ ಜಂಕ್ಷನ್ ದೇವಾಂಗ್ ಜಂಕ್ಷನ್ ಎಡತಿರುವು ಮಿಷನ್ ರಸ್ತೆ-ಫೈ ಓವರ್-ರೆಸಿಡೆನ್ಸಿ ರಸ್ತೆ ಮೂಲಕ ಸಾಗುವುದು.

ರಿಚ್ಮಂಡ್ಜಂಕ್ಷನ್ನಿಂದ ಮೈಸೂರು ಬ್ಯಾಂಕ್ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಶಾಂತಿನಗರ-ಮಿಷನ್ ಮಿಷನ್ ರಸ್ತೆ-ಸುಬ್ಬಯ್ಯ ಸರ್ಕಲ್-ಲಾಲ್ಬಾಗ್ ಪೂರ್ಣಿಮಾ ಜಂಕ್ಷನ್ನಲ್ಲಿ ಬಲತಿರುವು ಪಡೆದು ಶಿವಾಜಿ ಜಂಕ್ಷನ್-ಬಲತಿರುವು-ಪುರಭವನದ ಬಳಿ ಎಡ ತಿರುವು ಪಡೆದು ಮೈಸೂರು ರಸ್ತೆ ಅಥವಾ ಎನ್.ಆರ್ ಜಂಕ್ಷನ್-ಪೊಲೀಸ್ ಠಾಣೆ ಜಂಕ್ಷನ್-ಕೆಜಿ ರಸ್ತೆ ಮುಖಾಂತರ ಮೈಸೂರು ಬ್ಯಾಂಕ್ ತಲುಪಬಹು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow