Vaishnavi Gowda: ಗಂಡನ ಮನೆ ಕಡೆ ತಾಳಿ ಹಾಕೋ ಪದ್ಧತಿ ಇಲ್ಲ: ನಟಿ ವೈಷ್ಣವಿ ಗೌಡ
ಬೆಂಗಳೂರು: ಕಿರುತೆರೆ ನಟಿ ವೈಷ್ಣವಿ ಅವರು ಇತ್ತೀಚೆಗಷ್ಟೆ ಏರ್ಫೋರ್ಸ್ ಅಧಿಕಾರಿ ಅನುಕೂಲ್ ಮಿಶ್ರಾ ಅವರೊಂದಿಗೆ ವಿವಾಹವಾಗಿದ್ದಾರೆ. ವೈಷ್ಣವಿ ಅವರು ದಕ್ಷಿಣ ಭಾರತದವರು, ಅನುಕೂಲ್ ಉತ್ತರ ಭಾರತದವರು. ಈ ಜೋಡಿ ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯಿಂದ ಬಂದಿದ್ದರೂ, ಪರಸ್ಪರ ಅರ್ಥಮಾಡಿಕೊಳ್ಳುವ ಮನೋಭಾವದಿಂದ ವಿವಾಹ ಜೀವನ ಪ್ರಾರಂಭಿಸಿದ್ದಾರೆ.
ವಿವಾಹದ ಬಳಿಕ ವೈಷ್ಣವಿ ಅವರು ತಾಳಿ ಹಾಕದಿರುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಉತ್ತರ ನೀಡಿರುವ ವೈಷ್ಣವಿ, "ಅವರ ಮನೆಯ ಸಂಪ್ರದಾಯದಲ್ಲಿ ತಾಳಿ ಹಾಕುವುದಿಲ್ಲ. ನಾನು ಅವರ ಪದ್ಧತಿಗೆ ಗೌರವ ಸೂಚಿಸುತ್ತಿದ್ದೇನೆ," ಎಂದು ಸ್ಪಷ್ಟಪಡಿಸಿದ್ದಾರೆ.
ವೈಷ್ಣವಿ ಅವರು ತಮ್ಮ ಅತ್ತೆಯೂ ತಾಳಿ ಹಾಕುವುದಿಲ್ಲ ಎಂಬುದನ್ನು ತಿಳಿಸಿ, ಮದುವೆಯಲ್ಲಿ ತಾಳಿ ಮಾತ್ರವಲ್ಲದೆ ಇತರ ಪದ್ಧತಿಗಳೂ ಮಹತ್ವ ಹೊಂದಿವೆ ಎಂದು ತಿಳಿಸಿದ್ದಾರೆ. "ಮೂಗಿಗೆ ನಾಥ್, ಕೈಗೆ ಗಾಜಿನ ಬಳೆ, ಕಾಲಿಗೆ ಬಿಚ್ವೆ ಹಾಕುವುದು ಅವರ ಸಂಪ್ರದಾಯದಲ್ಲಿ ಸಾಮಾನ್ಯ. ನಾನು ಅದನ್ನೇ ಪಾಲಿಸುತ್ತಿದ್ದೇನೆ," ಎಂದು ತಿಳಿಸಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಆಯ್ಕೆ ಹಾಗೂ ಸಂಸ್ಕೃತಿ ಭಿನ್ನತೆಯ ಹಿನ್ನಲೆಯಲ್ಲಿ ತಾಳಿಯ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ವೈಷ್ಣವಿ, ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?