Deer Deaths: ಪುಣೆ ರಾಜೀವ್ ಗಾಂಧಿ ಪ್ರಾಣಿ ಸಂಗ್ರಹಾಲಯದಲ್ಲಿ 14 ಜಿಂಕೆಗಳು ಸಾವು!

ಪುಣೆಯ ರಾಜೀವ್ ಗಾಂಧಿ ಪ್ರಾಣಿಶಾಸ್ತ್ರ ಉದ್ಯಾನದಲ್ಲಿ ಕಳೆದ ಐದು ದಿನಗಳಲ್ಲಿ 14 ಜಿಂಕೆಗಳು ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಾಣಿಗಳು ಸರಣಿಯಾಗಿ ಮೃತಪಟ್ಟಿರುವುದು ಸ್ಥಳೀಯ ಆಡಳಿತ ಮತ್ತು ಪ್ರಾಣಿಶಾಸ್ತ್ರ ಇಲಾಖೆಗೆ ತಲೆನೋವಾಗಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರಾಣಿಗಳ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಆಹಾರದಲ್ಲಿ ವಿಷ ಅಥವಾ ಸೋಂಕು ಇದ್ದಿರಬಹುದೆಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಎಲ್ಲಾ ಕೋನಗಳಿಂದ ತಪಾಸಣೆ ಪ್ರಾರಂಭಿಸಲಾಗಿದೆ. ಆಹಾರದ ಮಾದರಿ, ವಾಸಸ್ಥಳ ಹಾಗೂ ಜಿಂಕೆಗಳ ದೇಹಪರೀಕ್ಷೆ ಮೂಲಕ ತನಿಖೆ ಸಾಗುತ್ತಿದೆ.
ಮಹಾರಾಷ್ಟ್ರ ಮೃಗಾಲಯ ಪ್ರಾಧಿಕಾರದ (MZA) ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಣಿ ವೈದ್ಯಕೀಯ ಮತ್ತು ರೋಗ ವಿಶ್ಲೇಷಣಾ ವಿಭಾಗಗಳಿಗೆ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ಪುಣೆ ಮಹಾನಗರ ಪಾಲಿಕೆ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಕರ್ನಾಟಕದ ಹುಲಿಗಳ ವಿಷಪ್ರಾಶನದ ಪ್ರಕರಣದ ನಂತರ ತೀವ್ರ ಆತಂಕವನ್ನು ಮೂಡಿಸಿದೆ. ಪ್ರಾಣಿಗಳ ರಕ್ಷಣೆಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಪರಿಸರ ಹಕ್ಕು ಹೋರಾಟಗಾರರಿಂದ ಮೂಡುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






