ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್..! “ದಾಸ”ನ ನೋಡಲು ಮುಗಿಬಿದ್ದ ಜನ

ಇಂದು ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾರೆ. ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರುತ್ತಿದೆ. ಇಂದು ಮುಂಜಾನೇ 5 ಗಂಟೆಯಿಂದಲೇ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ಬೆಳ್ಳಂಬೆಳಗ್ಗೆ ನಟ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ, ದಂಪತಿ ಸಮೇತ ಚಾಮುಂಡಿ ತಾಯಿಯ ದರ್ಶನ ಪಡೆದು ವಾಪಸ್ ಆಗಿದ್ದಾರೆ. ಪ್ರತಿ ವರ್ಷವೂ ಆಷಾಢದಲ್ಲಿ ದರ್ಶನ್ ಚಾಮುಂಡಿಯ ಆಶೀರ್ವಾದ ಪಡೆಯುತ್ತಾರೆ. ಕಳೆದ ಬಾರಿ ಜೈಲಿನಲ್ಲಿದ್ದ ಕಾರಣ ದೇವಿಯ ದರ್ಶನ ಮಾಡಿರಲಿಲ್ಲ.
ನಟ ದರ್ಶನ್ ಕಾರು ಚಾಮುಂಡಿ ಬೆಟ್ಟಕ್ಕೆ ಬರ್ತಿದ್ದಂತೆ ಅಭಿಮಾನಿಗಳು ಕಾರಿನ ಸುತ್ತ ಸುತ್ತವರಿದ್ರು. ಕಾರು ಇಳಿದ ದರ್ಶನ್ ಕಂಡು ಡಿಬಾಸ್, ಡಿಬಾಸ್ ಎಂದು ಕೂಗಿದ್ದಾರೆ. ಮೊಬೈಲ್ ಹಿಡಿದು ವಿಡಿಯೋ ಮಾಡಲು ಜನರು ಪರದಾಡಿದ್ರು. ಅಭಿಮಾನಿಗಳಿಗೆ ಕೈ ಮುಗಿದ ದರ್ಶನ್, ದೇವಸ್ಥಾನದ ಒಳಗೆ ತೆರಳಿದ್ದಾರೆ.
2ನೇ ಆಷಾಢದ ಶುಕ್ರವಾರದ ಹಿನ್ನೆಲೆ ದೇವಿಗೆ ಮುಂಜಾನೆ 3:30ಕ್ಕೆ ವಿವಿಧ ಅಭಿಷೇಕಗಳನ್ನು ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






