Rachitha Ram: ನಟಿ ರಚಿತಾ ರಾಮ್ ಚಿತ್ರರಂಗಕ್ಕೆ ಬಂದು 12 ವರ್ಷ: ಶುಭ ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮೇ 14, 2025 - 10:52
 0  27
Rachitha Ram: ನಟಿ ರಚಿತಾ ರಾಮ್ ಚಿತ್ರರಂಗಕ್ಕೆ ಬಂದು 12 ವರ್ಷ: ಶುಭ ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯ ಕಾಮಿಡಿ ಶೋ ತೀರ್ಪುಗಾರರಾಗಿಯೂ ಹೆಸರು ಮಾಡಿದ್ದಾರೆ. ಕಿರುತೆರೆ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಪಡೆದ ರಚಿತಾ ರಾಮ್ ದರ್ಶನ್ ಜೊತೆಗೆ 'ಬುಲ್ ಬುಲ್ ' ಸಿನಿಮಾ ಮಾಡಿ ಖ್ಯಾತಿಯ ಉತ್ತುಂಗಕ್ಕೇರಿದರು. ಆನಂತರ ಅವರು ತಿರುಗಿ ನೋಡಲೇ ಇಲ್ಲ. ದರ್ಶನ್, ಪುನೀತ್ ರಾಜ್ಕುಮಾರ್, ಉಪೇಂದ್ರ, ಸುದೀಪ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆಗೆ ರಚಿತಾ ಅವರದ್ದು.

ಇದೀಗ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ಇದ್ದಾರೆ. ಈ ವೇಳೆ ದರ್ಶನ್ ಅವರು ವಿಶೇಷ ಶುಭಾಶಯ ಸಂದೇಶವನ್ನು ಕಳುಹಿಸಿದ್ದಾರೆ.  ಹೌದು ರಚಿತಾ ರಾಮ್ ಅವರು ಸದ್ಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೇ ಮೇಲೆ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಅವರು ಚಿತ್ರರಂಗದಲ್ಲಿ 12 ವರ್ಷ ಕಳೆದ ಸಂಭ್ರಮವನ್ನು ಆಚರಿಸಲಾಯಿತು. ‘ಇದು ಆರ್ಡಿನರ್ ಸುಳಿ ಅಲ್ಲ’ ಎಂದು ರಚಿತಾ ಡಿಂಪಲ್​ನ ರವಿಚಂದ್ರನ್ ಹೊಗಳಿದರು. ಆ ಬಳಿಕ ಅವರಿಗೆ ಸಿಕ್ಕಿತು ಸರ್​ಪ್ರೈಸ್.

https://www.instagram.com/reel/DJmHfYchfDy/?utm_source=ig_embed&ig_rid=fcc2a366-5eef-4d8e-8943-becff78b7bbb

ದರ್ಶನ್ ಅವರು ರಚಿತಾಗೆ ಕಳುಹಿಸಿದ ಧ್ವನಿ ಸಂದೇಶವನ್ನು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಪ್ರಸಾರ ಮಾಡಲಾಯಿತು. ‘ನಮ್ಮ ಬುಲ್ ಬುಲ್ ಎಲ್ಲರನ್ನು ಹೀಗೆ ರಂಜಿಸುತ್ತಿರಲಿ’ ಎಂದು ದರ್ಶನ್ ಅವರು ಹಾರೈಸಿದ್ದಾರೆ. ಈ ಸಂದೇಶ ಕೇಳಿ ರಚಿತಾ ರಾಮ್ ಅವರು ಸಖತ್ ಖುಷಿಪಟ್ಟಿದ್ದಾರೆ. ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow