Darshan: ವಿದೇಶಿ ಬಾತುಕೋಳಿ ಸಾಕಿದ ಆರೋಪ: ವಿಚಾರಣೆ ಮುಂದೂಡಿದ ಕೋರ್ಟ್

ಜುಲೈ 5, 2025 - 10:52
 0  7
Darshan: ವಿದೇಶಿ ಬಾತುಕೋಳಿ ಸಾಕಿದ ಆರೋಪ: ವಿಚಾರಣೆ ಮುಂದೂಡಿದ ಕೋರ್ಟ್

ಪಕ್ಷಿ ಹಾಗೂ ಪ್ರಾಣಿಪ್ರಿಯ ಡಿ ಬಾಸ್ ದರ್ಶನ್‌‌ಗೆ ಒಂದಲ್ಲ ಎರಡೆರಡು ಫಾರ್ಮ್ ಹೌಸ್‌‌ಗಳಿವೆ. ಒಂದು ಮೈಸೂರಿನ ತೂಗುದೀಪ ಫಾರ್ಮ್ ಹೌಸ್. ಮತ್ತೊಂದು ಟಿ ನರಸೀಪುರದ ಕೆಂಪಯ್ಯನ ಹುಂಡಿಯಲ್ಲಿರೋ ಫಾರ್ಮ್ ಹೌಸ್. ಎರಡೂ ಕಡೆ ಕುರಿ, ಮೇಕೆ, ಕೋಳಿ, ಹಸು, ಎತ್ತು.. ಅಷ್ಟೇ ಯಾಕೆ ಕುದುರೆಗಳನ್ನ ಕೂಡ ಸಾಕಿದ್ದಾರೆ ನಟ ದರ್ಶನ್. ಕೆಂಪಯ್ಯನ ಹುಂಡಿಯಲ್ಲಿರೋ ಫಾರ್ಮ್‌ ಹೌಸ್‌‌ನಲ್ಲಿ ನಾಲ್ಕು ಮಿಡಲ್ ಏಷ್ಯಾ ಮೂಲದ ವಿದೇಶಿ ಬಾತುಕೋಳಿಗಳನ್ನ ಸಾಕಿದ್ರು ದರ್ಶನ್.

ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್​ಐಆರ್ ದಾಖಲು ಮಾಡಿತ್ತು. ಆ ಕೇಸ್ ವಿಚಾರಣೆಗೆ ಟಿ. ನರಸಿಪುರ ಕೋರ್ಟ್​ಗೆ ದರ್ಶನ್ ಹಾಜರಾಗಬೇಕಿತ್ತು. ಕೋರ್ಟ್​​ನಿಂದ ದರ್ಶನ್-ವಿಜಯಲಕ್ಷ್ಮೀ ದಂಪತಿಯ ವಿಚಾರಣೆ ಮುಂದೂಡಿಕೆ ಆಗಿದೆ.

ನ್ಯಾಯಾಲಯವು ಸೆಪ್ಟೆಂಬರ್​ 4ಕ್ಕೆ ವಿಚಾರಣೆ ಮುಂದೂಡಿದೆ. ಅರಣ್ಯ ಇಲಾಖೆ 2 ವರ್ಷದ ಹಿಂದೆ ನೋಟಿಸ್ ನೀಡಿ FIR ದಾಖಲಿಸಿತ್ತು. ವಿದೇಶಿ ಬಾತುಕೋಳಿ ಸಾಕಲು ಅನುಮತಿ ಪಡೆಯದ ಹಿನ್ನೆಲೆಯಲ್​ಲಿ ಎಫ್​ಐಆರ್ ಹಾಕಲಾಗಿತ್ತು. ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿ ಇರುವ ಫಾರ್ಮ್​ ಹೌಸ್​ನಲ್ಲಿ ದರ್ಶನ್ ಅವರು ಬಾರ್ ಹೆಡೆಡ್ ಗೂಸ್ ಬಾತುಕೋಳಿ ಸಾಕಿದ್ದರು.

ಈ ಬಗ್ಗೆ ಯುಟ್ಯೂಬ್ ಚಾನೆಲ್​ ಸಂದರ್ಶನದಲ್ಲಿ ದರ್ಶನ್ ಮಾಹಿತಿ ನೀಡಿದ್ದಾಗ ವಿಷಯ ಬಹಿರಂಗ ಆಗಿತ್ತು. ದರ್ಶನ್, ಪತ್ನಿ ವಿಜಯಲಕ್ಷ್ಮೀ ಸೇರಿ ಮೂವರಿಗೆ ಅರಣ್ಯ ಇಲಾಖೆಯವರು ನೋಟಿಸ್​ ನೀಡಿದ್ದರು. ತೋಟದ ಮ್ಯಾನೇಜರ್ ನಾಗರಾಜುಗೂ ನೋಟಿಸ್ ನೀಡಲಾಗಿತ್ತು. ದರ್ಶನ್ ಪರ ಸುನೀಲ್ ಕುಮಾರ್ ವಕೀಲರಾಗಿದ್ದಾರೆ. ಸುನೀಲ್​ ಪರವಾಗಿ ಹಿರಿಯ ವಕೀಲ ಬಸವಣ್ಣ ಕೋರ್ಟ್​ಗೆ ಹಾಜರಾಗಿದ್ದರು. ನ್ಯಾಯಾಲಯ ಈ ಕೇಸ್ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow