ಲವ್ ಯೂ ದರ್ಶನ್: ಪ್ರೀತಿಯ ಗೆಳೆಯನಿಗೆ ಬರ್ತಡೇ ವಿಶ್ ಮಾಡಿದ ರಕ್ಷಿತಾ!

ಫೆಬ್ರವರಿ 16, 2025 - 12:16
 0  10
ಲವ್ ಯೂ ದರ್ಶನ್: ಪ್ರೀತಿಯ ಗೆಳೆಯನಿಗೆ ಬರ್ತಡೇ ವಿಶ್ ಮಾಡಿದ ರಕ್ಷಿತಾ!

ಸ್ಯಾಂಡಲ್‍ವುಡ್‌ನ ಮಾಸ್ ಜೋಡಿ ಎನ್ನಿಸಿಕೊಂಡಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಕ್ಷಿತಾ. ಕಲಾಸಿಪಾಳ್ಯ, ಅಯ್ಯ, ಸುಂಟರಗಾಳಿ ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‌ನಲ್ಲಿ ಈ ಜೋಡಿ ಹಾಟ್ ಫೇವರಿಟ್ ಎನ್ನಿಸಿಕೊಂಡಿತ್ತು.

ಕಲಾಸಿಪಾಳ್ಯ, ಅಯ್ಯ, ಮಂಡ್ಯ ಮತ್ತು ಸುಂಟರಗಾಳಿ ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ಈ ಜೋಡಿಗೆ ಕನ್ನಡ ಚಿತ್ರರಸಿಕರು ಫಿದಾ ಆಗಿದ್ದರು.

ರ್ಶನ್ ಹಾಗೂ ರಕ್ಷಿತಾ ಫ್ರೆಂಡ್ ಶಿಪ್ ಎಂಥದ್ದು ಅಂತ ಎಲ್ಲರಿಗೂ ಗೊತ್ತೇ ಇದೆ. ತೆರೆ ಮೇಲೆ ಎಷ್ಟು ಮೋಡಿ ಮಾಡಿತ್ತೋ ಈ ಜೋಡಿ, ಹಾಗೆ ಜೀವನದಲ್ಲೂ ಇವರಿಬ್ಬರ ಫ್ರೆಂಡ್ಸಿಪ್ ತುಂಬಾ ಟ್ರೂ ಆಗಿದೆ. ರಕ್ಷಿತಾ ಕಷ್ಟ ಸುಖದಲ್ಲಿ ದರ್ಶನ್ ಭಾಗಿಯಾಗಿದ್ದಾರೆ. ಅದರಂತೆ ದರ್ಶನ್ ಕಷ್ಟದಲ್ಲೂ ರಕ್ಷಿತಾ ಜೊತೆ ಆಗಿದ್ದರು. 

ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಸಹಜವಾಗಿ ಆಪ್ತರು, ಸಿನಿ ತಾರೆಯರು, ಅಭಿಮಾನಿಗಳು ನಟ ದರ್ಶನ್‌ಗೆ ವಿಶ್‌ ಮಾಡುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಫ್ರೆಂಡ್‌ ದರ್ಶನ್‌ಗೆ ವಿಶ್‌ ಮಾಡಿ ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಕಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ನಟಿ ರಕ್ಷಿತಾ ಪ್ರೇಮ್ ವಿಶೇಷವಾಗಿ ಶುಭಕೋರಿದ್ದಾರೆ. ‘ಇವತ್ತು ವಿಶೇಷ ದಿನ‌, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ‌ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್‌. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow