Sai Pallavi: 2 ವರ್ಷದ ಬಳಿಕ ಪ್ರೇಕ್ಷಕರೆದುರು ಬಂದ ಸಿಂಪಲ್‌ ಬ್ಯೂ‌ಟಿ ಸಾಯಿ ಪಲ್ಲವಿ!

ಸೆಪ್ಟೆಂಬರ್ 30, 2024 - 09:00
 0  20
Sai Pallavi: 2 ವರ್ಷದ ಬಳಿಕ ಪ್ರೇಕ್ಷಕರೆದುರು ಬಂದ ಸಿಂಪಲ್‌ ಬ್ಯೂ‌ಟಿ ಸಾಯಿ ಪಲ್ಲವಿ!

ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸಾಯಿ ಪಲ್ಲವಿ ಫೇಮಸ್ ಆಗಿದ್ದಾರೆ. ಅಂದಹಾಗೆ ಸಾಯಿ ಪಲ್ಲವಿ ಓದಿದ್ದು ಮೆಡಿಕಲ್. ಆದರೆ, ಅವರು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಡ್ಯಾನ್ಸ್​ನಲ್ಲಿ ಸಾಯಿ ಪಲ್ಲವಿ ನಿಪುಣರು. ಸಾಯಿ ಪಲ್ಲವಿ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಶಿವಕಾರ್ತಿಕೇಯ ನಟನೆಯ ‘ಅಮರನ್’ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ. ಸದ್ಯ ಎರಡು ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ್ದಾರೆ. ‘ಅಮರನ್’ ಚಿತ್ರದ ಮೂಲಕ ಮತ್ತೆ ನಟಿ ಸದ್ದು ಮಾಡುತ್ತಿದ್ದಾರೆ. ನಟಿಯ ಕ್ಯಾರೆಕ್ಟರ್ ಟೀಸರ್ ರಿವೀಲ್ ಚಿತ್ರತಂಡ ಸರ್ಪ್ರೈಸ್ ನೀಡಿದೆ. 

ಶಿವಕಾರ್ತಿಕೇಯನ್ ನಟನೆಯಅಮರನ್ಚಿತ್ರದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಿದ್ದಾರೆ. ವೀರಯೋಧ ಮೇಜರ್ ಮುಕುಂದ ವರದರಾಜನ್ ಬಯೋಪಿಕ್ ಆಗಿದೆ. ಇದರಲ್ಲಿ ವೀರಯೋಧನಾಗಿ ಶಿವಕಾರ್ತಿಕೇಯನ್ ನಟಿಸಿದ್ರೆ, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ. ಇನ್ನೂ ಚಿತ್ರದಲ್ಲಿ ನಟಿಯ ಕ್ಯಾರೆಕ್ಟರ್ ಟೀಸರ್ 1:22 ನಿಮಿಷವಿದ್ದು, ಸಾಯಿ ಪಲ್ಲವಿ ಗುಂಗುರು ಕೂದಲು ಬಿಟ್ಟು ನಯಾ ಲುಕ್ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂಅಮರನ್ಚಿತ್ರವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow