IND vs WI: 15 ವರ್ಷಗಳ ಬಳಿಕ ದಿಗ್ಗಜರಿಲ್ಲದೇ ಭಾರತ ಟೆಸ್ಟ್ ಕಣಕ್ಕಿಳಿದ ವಿಶೇಷ ಪಂದ್ಯ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಆರಂಭವಾಗಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಈ ಪಂದ್ಯವು ಟೀಮ್ ಇಂಡಿಯಾ ಅಭಿಮಾನಿಗಳಿಗೆ ವಿಶೇಷ. ಏಕೆಂದರೆ ಕಳೆದ 15 ವರ್ಷಗಳಲ್ಲಿ ಮೊಟ್ಟಮೊದಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಇಲ್ಲದೇ ಭಾರತ ತವರಿನಲ್ಲಿ ಟೆಸ್ಟ್ ಕಣಕ್ಕಿಳಿದಿದೆ.
ವಿಶೇಷ ಅಂಶಗಳು:
ನವೆಂಬರ್ 2010ರಲ್ಲಿ ನಾಗ್ಪುರದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ಟೆಸ್ಟ್ ಬಳಿಕ ಇದೇ ಮೊಟ್ಟಮೊದಲ ಬಾರಿ ಈ ಮೂವರು ದಿಗ್ಗಜರಿಲ್ಲದೇ ಭಾರತ ತವರಿನಲ್ಲಿ ಟೆಸ್ಟ್ ಆಡುತ್ತಿದೆ.
ಕಳೆದ 15 ವರ್ಷಗಳಲ್ಲಿ ತವರಿನ ಪ್ರತಿಯೊಂದು ಟೆಸ್ಟ್ ಪಂದ್ಯದಲ್ಲೂ, ಈ ಮೂವರು ಆಟಗಾರರಲ್ಲಿ ಕನಿಷ್ಠ ಒಬ್ಬರು ಕಣಕ್ಕಿಳಿದಿದ್ದರು.
ಇದೀಗ ಅವರು ಟೆಸ್ಟ್ ಕ್ರಿಕೆಟ್ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಭಾರತ ಸಂಪೂರ್ಣ ಹೊಸ ಸಂಯೋಜನೆಯೊಂದಿಗೆ ಕಣಕ್ಕಿಳಿದಿದೆ.
ಭಾರತ ಪ್ಲೇಯಿಂಗ್ XI (ಮೊದಲ ಟೆಸ್ಟ್, ವೆಸ್ಟ್ ಇಂಡೀಸ್ ವಿರುದ್ಧ):
ಯಶಸ್ವಿ ಜೈಸ್ವಾಲ್
ಕೆ.ಎಲ್. ರಾಹುಲ್
ಸಾಯಿ ಸುದರ್ಶನ್
ಶುಭಮನ್ ಗಿಲ್ (ನಾಯಕ)
ಧ್ರುವ್ ಜುರೆಲ್ (ವಿಕೆಟ್ ಕೀಪರ್)
ನಿತೀಶ್ ಕುಮಾರ್ ರೆಡ್ಡಿ
ರವೀಂದ್ರ ಜಡೇಜಾ
ವಾಷಿಂಗ್ಟನ್ ಸುಂದರ್
ಕುಲ್ದೀಪ್ ಯಾದವ್
ಜಸ್ಪ್ರೀತ್ ಬುಮ್ರಾ
ಮೊಹಮ್ಮದ್ ಸಿರಾಜ್
ನಿಮ್ಮ ಪ್ರತಿಕ್ರಿಯೆ ಏನು?