ಸೀಮಂತ ಸಂಭ್ರಮ: ಲವ್ ಮಾಕ್ಟೇಲ್ 2 ನಟಿ ಸುಶ್ಮಿತಾ ಫೋಟೋಸ್ ವೈರಲ್!

ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಅಭಿನಯಿಸಿ ನಿರ್ದೇಶಿಸಿದ್ದ ಲವ್ ಮಾಕ್ಟೇಲ್ 2 ಹೆಚ್ಚು ಪ್ರದರ್ಶನ ಕಂಡಿತು. ಈ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಶ್ಮಿತಾ ಅವರು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಸುಶ್ಮಿತಾ ಗೌಡ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಖುಷಿಯಲ್ಲಿದ್ದ ಸ್ಟಾರ್ ನಟಿ ಸುಶ್ಮಿತಾ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ.
ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ನಟಿ ಸುಶ್ಮಿತಾ ಕಾಣಿಸಿಕೊಂಡಿದ್ದರು. ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಸಿಂಪಲ್ ಆಗಿ ಸೀಮಂತ ಶಾಸ್ತ್ರ ಮಾಡಲಾಗಿದೆ.
2022ರಲ್ಲಿ ಅಶ್ವಿನ್ ಮತ್ತು ಸುಶ್ಮಿತಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ವಿದೇಶದಲ್ಲಿ ಕೆಲವು ವರ್ಷ ನೆಲೆಸಿದ್ದಾರೆ. ಆಗಾಗ ದಂಪತಿ ಬೆಂಗಳೂರು ಮತ್ತು ಫಾರಿನ್ ಅಂತ ಓಡಾಡುತ್ತಿದ್ದಾರೆ.
ಲವ್ ಮಾಕ್ಟೇಲ್ 2 ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






