ಭಾರತದಲ್ಲಿ ಆನ್ ಲೈನ್ ಗೇಮಿಂಗ್ ಮಸೂದೆ ಜಾರಿಗೆ: ಕ್ರಿಕೆಟ್ ಸ್ಟಾರ್ʼಗಳಿಗೆ ಬಿಗ್ ಶಾಕ್.!

ಆಗಸ್ಟ್ 28, 2025 - 09:22
 0  16
ಭಾರತದಲ್ಲಿ ಆನ್ ಲೈನ್ ಗೇಮಿಂಗ್ ಮಸೂದೆ ಜಾರಿಗೆ: ಕ್ರಿಕೆಟ್ ಸ್ಟಾರ್ʼಗಳಿಗೆ ಬಿಗ್ ಶಾಕ್.!

ಭಾರತದಲ್ಲಿ ಇತ್ತೀಚೆಗೆ ಅಂಗೀಕರಿಸಿದ ಆನ್ಲೈನ್ ಗೇಮಿಂಗ್ ಮಸೂದೆ ಕ್ರಿಕೆಟ್ ಮತ್ತು ಫ್ಯಾಂಟಸಿ ಗೇಮಿಂಗ್ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಮಸೂದೆ ರಿಯಲ್ ಮನಿ ಫ್ಯಾಂಟಸಿ ಕ್ರಿಕೆಟ್, ರಮ್ಮಿ, ಪೋಕರ್ ಸೇರಿದಂತೆ ಅನೇಕ ಆನ್ಲೈನ್ ಆಟಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮಗಳ ಪ್ರಕಾರ, ರೀತಿಯ ಆನ್ಲೈನ್ ಆಟಗಳನ್ನು ಆಡುವುದು ಅಥವಾ ಹೋಸ್ಟ್ ಮಾಡುವುದು 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ರಿಂದ 2 ಕೋಟಿ ರೂ. ದಂಡಕ್ಕೆ ಒಳಪಡಿಸಬಹುದಾಗಿದೆ. ಜೊತೆಗೆ ವೇದಿಕೆಗಳ ಪ್ರಚಾರ ಮತ್ತು ಜಾಹೀರಾತುಗಳನ್ನು ಸಹ ನಿಷೇಧಿಸಲಾಗಿದೆ.

ಮಸೂದೆ ಫ್ಯಾಂಟಸಿ ಗೇಮಿಂಗ್ ವೇದಿಕೆಗಳ ಬ್ರಾಂಡ್ ರಾಯಭಾರಿಯಾದ ಟೀಂ ಇಂಡಿಯಾ ಆಟಗಾರರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಹಲವಾರು ಸ್ಟಾರ್ ಆಟಗಾರರು ಡ್ರೀಮ್ 11, ಮೈ 11 ಸರ್ಕಲ್, ಎಂಪಿಎಲ್, ವಿನ್ಝೋ ಫ್ಯಾಂಟಸಿ ಗೇಮಿಂಗ್ ವೇದಿಕೆಗಳ ರಾಯಭಾರಿಗಳಾಗಿದ್ದರು.

ಕ್ರಿಕ್ಬಜ್ ವರದಿ ಪ್ರಕಾರ, ಕೊಹ್ಲಿ ಅವರ ಒಪ್ಪಂದವು ವರ್ಷಕ್ಕೆ ಸುಮಾರು 10-12 ಕೋಟಿ ರೂ. ಇದ್ದರೆ, ರೋಹಿತ್ ಶರ್ಮಾ ಮತ್ತು ಧೋನಿ 6-7 ಕೋಟಿ ರೂ. ಗಳಿಸುತ್ತಿದ್ದರು. ಯುವ ಆಟಗಾರರ ಆದಾಯ ವರ್ಷಕ್ಕೆ 1 ಕೋಟಿ ರೂ. ಇರಿತ್ತು. ಮಸೂದೆ ಜಾರಿಗೆ ಬಂದ ಮೇಲೆ, ಭಾರತೀಯ ಕ್ರಿಕೆಟಿಗರು ವರ್ಷಕ್ಕೆ 150 ರಿಂದ 200 ಕೋಟಿ ರೂ. ನಷ್ಟಮಾಡುವ ಸಾಧ್ಯತೆ ಇದೆ. ನಿರ್ಣಯ ಕ್ರಿಕೆಟ್ ಉದ್ಯಮಕ್ಕೆ ಮಾತ್ರವಲ್ಲದೆ, ಆಟಗಾರರ ಬ್ರಾಂಡ್ಗಳು, ಸ್ಪಾನ್ಸರ್ಗಳು ಮತ್ತು ಪ್ರಚಾರದ ಆದಾಯಕ್ಕೆ ಕೂಡ ದೊಡ್ಡದಾಗಿ ಪರಿಣಾಮ ಬೀರುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow