ಟಿಪ್ಪು ಆಡಳಿತ ಮಾಡಿದ ಅನ್ನೊ ಕಾರಣಕ್ಕೆ ಚಾಮುಂಡಿ ಬೆಟ್ಟ ವಕ್ಫ್ ಆಸ್ತಿಯೇ?: ಶೋಭಾ ಕರಂದ್ಲಾಜೆ

ಆಗಸ್ಟ್ 27, 2025 - 20:41
 0  13
ಟಿಪ್ಪು ಆಡಳಿತ ಮಾಡಿದ ಅನ್ನೊ ಕಾರಣಕ್ಕೆ ಚಾಮುಂಡಿ ಬೆಟ್ಟ ವಕ್ಫ್ ಆಸ್ತಿಯೇ?: ಶೋಭಾ ಕರಂದ್ಲಾಜೆ

ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಚಾಮುಂಡೇಶ್ವರಿ ಹಿಂದೂಗಳ ಆಸ್ತಿ ಅಲ್ಲಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ 3,500 ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಇವು ಮುಜುರಾಯಿ ಆಸ್ತಿಗಳಾದರೆ ಅವು ಹಿಂದೂಗಳ ಆಸ್ತಿಯೇ ಆಗುತ್ತವೆ. ಸರ್ಕಾರದ ಆಸ್ತಿ ಹಿಂದೂಗಳದ್ದಲ್ಲ ಎಂದರೆ ಡಿಕೆಶಿ ಅವರು ಏನು ಹೇಳಲು ಹೊರಟಿದ್ದಾರೆ?” ಎಂದು ಪ್ರಶ್ನಿಸಿದರು.

 ಮುಖ್ಯಮಂತ್ರಿಯಾಗುವ ಭರದಲ್ಲಿ ನೀವು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದೀರಿ. ಹಿಂದೂಗಳ ವಿಚಾರದಲ್ಲಿ ಸಂಶಯ ಹುಟ್ಟಿಸುತ್ತಿದ್ದೀರಿ. ಇಂತಹ ಸರ್ಕಾರವನ್ನು ಬಿಟ್ಟು ಹಿಂದೂ ಮನಸ್ಸುಳ್ಳವರು ಬಂದು ಆಡಳಿತ ಮಾಡುತ್ತಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದವರ ಕಡೆಯಿಂದ ಉದ್ಘಾಟನೆ ಮಾಡಿಸುತ್ತಿದ್ದಾರೆ. ಮೂಲಕ ಹಿಂದೂಗಳಿಗೆ ಅವಮಾನ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಚಾಮುಂಡೇಶ್ವರಿ ಮತ್ತು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಹಾಗಿದ್ರೆ ಇದು ಯಾರ ಆಸ್ತಿ? ಟಿಪ್ಪು ಆಡಳಿತ ಮಾಡಿದ ಅನ್ನೊ ಕಾರಣಕ್ಕೆ ಅದು ವಕ್ಫ್ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow