ನನ್ನ ತಂಟೆಗೆ ಬಂದ್ರೆ ವಿಡಿಯೋ ರಿಲೀಸ್ ಮಾಡ್ತಿನಿ: ಕಾಂಗ್ರೆಸ್ ಮುಖಂಡನಿಗೆ ಬ್ಲ್ಯಾಕ್'ಮೇಲ್

ಅಕ್ಟೋಬರ್ 2, 2025 - 12:18
 0  11
ನನ್ನ ತಂಟೆಗೆ ಬಂದ್ರೆ ವಿಡಿಯೋ ರಿಲೀಸ್ ಮಾಡ್ತಿನಿ: ಕಾಂಗ್ರೆಸ್ ಮುಖಂಡನಿಗೆ ಬ್ಲ್ಯಾಕ್'ಮೇಲ್

ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿದ್ದೇಗೌಡಗೆ ಬ್ಲ್ಯಾಕ್ಮೇಲ್ ಮಾಡಿದ ಸ್ಥಳೀಯ ರಾಜಕಾರಣಿ ಧನಂಜಯ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಿದ್ದೇಗೌಡ ಅವರ ಪತ್ನಿ ಯಶೋಧ ಅವರ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಚುನಾವಣೆಯ ವೇಳೆ ಮಕ್ಕಳ ವಿಡಿಯೋ ಹಾಗೂ ಮೆಸೇಜ್ ಸ್ಕ್ರೀನ್‌ಶಾಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಧನಂಜಯ್ ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.

ಧನಂಜಯ್ ಆಗಾಗ ಯಶೋಧ ಅವರ ಮನೆಗೆ ಹೋಗುತ್ತಿದ್ದ. ನಿನ್ನ ಗಂಡ ಬಿಬಿಎಂಪಿ ಚುನಾವಣೆಗೆ ನಿಂತರೆ, ಮಕ್ಕಳ ವಿಡಿಯೋ ಮತ್ತು ಮಹಿಳೆಯರಿಗೆ ಕಳಿಸಿದ ಮೆಸೇಜ್‌ಗಳ ಸ್ಕ್ರೀನ್‌ಶಾಟ್ ರಿಲೀಸ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದ.

ಸಿದ್ದೇಗೌಡ ಮೆಸೇಜ್ ಸ್ಕ್ರೀನ್‌ಶಾಟ್ ಅನ್ನು ಯಶೋಧ ಅವರಿಗೆ ಕಳುಹಿಸಿ ಬಳಿಕ ಡಿಲೀಟ್ ಮಾಡಿದ್ದಾನೆ.

ಬ್ಲ್ಯಾಕ್ಮೇಲ್ ಮಾಡುವುದರ ಜೊತೆಗೆ ಯಶೋಧ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಹವಾಸಕ್ಕೆ ಒತ್ತಾಯಿಸಿದ್ದ.“ತನ್ನ ತಂಟೆಗೆ ಬಂದರೆ ಮಕ್ಕಳ ಜೀವ ಕಸಿದುಕೊಳ್ಳುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow