Insults Kannada People: ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆ: ಹೋಟೆಲ್ ಸಿಬ್ಬಂದಿ ಎಳೆದೋಯ್ದ ಖಾಕಿ..!

ಮೇ 17, 2025 - 14:01
 0  17
Insults Kannada People:  ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆ: ಹೋಟೆಲ್ ಸಿಬ್ಬಂದಿ ಎಳೆದೋಯ್ದ ಖಾಕಿ..!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಈ ಸಾಮರಸ್ಯದ ಸಂಸ್ಕೃತಿಗೆ ಧಕ್ಕೆ ತರುವ ಘಟನೆಗಳು ದಾಖಲಾಗುತ್ತಿವೆ. ಕನ್ನಡಿಗರು ಯಾವಾಗಲೂ ಸರ್ವರನ್ನು ಒಪ್ಪಿಕೊಂಡು, ತಮಿಳು, ತೆಲುಗು, ಮಲಯಾಳಂ, ಮರಾಠಿ, ಮತ್ತು ಇತರ ಭಾಷೆಗಳನ್ನು ಸಹ ಗೌರವಿಸುವ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದಾರೆ. ಕೆಂಪೇಗೌಡರು 500 ವರ್ಷಗಳ ಹಿಂದೆ ಸ್ಥಾಪಿಸಿದ ಬೆಂಗಳೂರಿನ 38 ಪೇಟೆಗಳು ಈ ಸಾಮರಸ್ಯದ ಸಂಕೇತವಾಗಿವೆ, ಎಲ್ಲ ಭಾಷೆಯವರಿಗೂ ಜಾಗ ನೀಡಿವೆ.

ಆದ್ರೆ ಕೋರಮಂಗಲದಂತಹ ಪ್ರದೇಶಗಳಲ್ಲಿ  ಕನ್ನಡಿಗರಿಗೆ ಅಪಮಾನ ಮಾಡುಲಾಗುತ್ತಿದೆ. ಹೌದು ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ ಜಿಎಸ್ ಸೂಟ್ಸ್ ಹೊಟೇಲ್‌ನ ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಅವಹೇಳನಕಾರಿ ಬರಹವನ್ನು ಪ್ರದರ್ಶಿಸಿದ ಘಟನೆಯು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಡಿವಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

KANNAGIDA M*** ಅಂತ ಬರೆದು ಅತಿರೇಕದ ಉದ್ಧಟತನ ಮೆರೆದಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITE ನ ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರಿಗೆ ಅಪಮಾನ ಆಗುವಂತಹ ಬರಹ ಹಾಕಲಾಗಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೋಟೆಲ್ ಇದಾಗಿದ್ದು, ಹೋಟೆಲ್ ಗೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಹೊಟೇಲ್‌ನ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತು ಬೋರ್ಡನ್ನು ಕಿತ್ತು ಹಾಕಿದ್ದಾರೆ.

ಇತ್ತೀಚಿಗೆ ನಗರದ ಖಾಸಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಖ್ಯಾತ ಗಾಯಕ ಸೋನು ನಿಗಮ್‌ ಕನ್ನಡ ಮತ್ತು ಕನ್ನಡಿಗರನ್ನು ಅವಮಾನಿಸುವ ರೀತಿ ನೀಡಿರುವ ಹೇಳಿಕೆಗೆ ಕನ್ನಡಿಗರು ಹಾಗೂ ನಾನಾ ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow