ಇಂದಿರಾ ಎಮರ್ಜೆನ್ಸಿ ಸಿನಿಮಾ: ಪ್ರಿಯಾಂಕ ಗಾಂಧಿಗೆ ಆಹ್ವಾನ ಕೊಟ್ಟ ಕಂಗನಾ ರಣಾವತ್!

ಜನವರಿ 8, 2025 - 18:16
 0  9
ಇಂದಿರಾ ಎಮರ್ಜೆನ್ಸಿ ಸಿನಿಮಾ: ಪ್ರಿಯಾಂಕ ಗಾಂಧಿಗೆ ಆಹ್ವಾನ ಕೊಟ್ಟ  ಕಂಗನಾ ರಣಾವತ್!

ತಾವೇ ನಟಿಸಿ ನಿರ್ದೇಶಿಸಿರುವ ಇಂದಿರಾ ಎಮರ್ಜೆನ್ಸಿ ಚಿತ್ರ ನೋಡುವಂತೆ ಪ್ರಿಯಾಂಕ ಗಾಂಧಿಗೆ ನಟಿ ಕಂಗನಾ ರಣಾವತ್ ಪ್ರೀತಿಯ ಆಹ್ವಾನ ಕೊಟ್ಟಿದ್ದಾರೆ. 

ಕಂಗನಾ ರಣಾವತ್ ಅವರು ಎಮರ್ಜೆನ್ಸಿ ಸಿನಿಮಾದಲ್ಲಿ 1975ರ ಜೂನ್ 25 ರಂದು ದೇಶದ ಮೇಲೆ ಎಮರ್ಜೆನ್ಸಿ ಹೇರಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಯಾವುದೇ ಸೆನ್ಸೇಷನ್ ಮಾಡಿಲ್ಲ. ಇಂದಿರಾಗಾಂಧಿ ಅವರನ್ನು ಘನತೆಯಿಂದ ಸಿನಿಮಾದಲ್ಲಿ ತೋರಿಸಲಾಗಿದೆ. ಇಂದಿರಾಗಾಂಧಿ ಜೀವನದ ಬಗ್ಗೆ ಸಂಶೋಧನೆ ಮಾಡಿ ಸಿನಿಮಾ ಚಿತ್ರೀಕರಿಸಲಾಗಿದೆ ಎಂದಿದ್ದಾರೆ.

ಇಂದಿರಾ ಗಾಂಧಿ ಅವರ ಎಮರ್ಜೆನ್ಸಿ ಕುರಿತಾದ ಈ ಸಿನಿಮಾ ಇದೇ ಜನವರಿ 17 ರಂದು ಬಿಡುಗಡೆ ಮಾಡಲಾಗುತ್ತಿದೆ. ನಟಿ, ಸಂಸದೆ ಕಂಗನಾ ರಣಾವತ್ ಅವರು ಸಿನಿಮಾದ ಪ್ರೀಮಿಯರ್ ಶೋ ನೋಡಲು ಬರುವಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಗೆ ಆಹ್ವಾನ ಕೊಟ್ಟಿದ್ದಾರೆ.

ಸಂಸತ್‌ನಲ್ಲಿ ಭೇಟಿ ಮಾಡಿರುವ ಕಂಗನಾ ರಣಾವತ್ ಅವರು ನಾನು ಎಮರ್ಜೆನ್ಸಿ ಸಿನಿಮಾಗೆ ಪ್ರಿಯಾಂಕಾ ಗಾಂಧಿರನ್ನು ಆಹ್ವಾನಿಸಿದ್ದೇನೆ. ನೀವು ಸಿನಿಮಾವನ್ನು ಇಷ್ಟಪಡುತ್ತೀರಿ ಎಂದು ಹೇಳಿದ್ದೇನೆ ಎಂದಿದ್ದಾರೆ,

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow