ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ

ಅಕ್ಟೋಬರ್ 2, 2025 - 14:30
 0  12
ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ

ಮೈಸೂರು:- ಇಷ್ಟು ದಿನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆ ಮಾಡಿದ್ದ ದಸರಾ ಸಂಭ್ರಮ  ಇಂದಿಗೆ ಮುಕ್ತಾಯ ಆಗಲಿದೆ.

ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಮಧ್ಯಾಹ್ನ1 ರಿಂದ 18ರ ಶುಭ ಧನುರ್ ಲಗ್ನದಲ್ಲಿ ಪೂಜೆ ನೆರವೇರಿದೆ. ಕೋಟೆ ಆಂಜನೇಯ ಸ್ವಾಮಿ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಾಯಿತು. ಈ ವೇಳೆ ಸಿಎಂ ಈಡುಗಾಯಿ ಒಡೆದರು. ಎರಡು ಸಲ ವಿಫಲವಾಗಿ, ಮೂರನೇ ಬಾರಿಗೆ ಈಡುಗಾಯಿ ಒಡೆಯುವಲ್ಲಿ ಅವರು ಯಶಸ್ವಿಯಾದರು. 

ಬಳಿಕ ಮಾತನಾಡಿದ ಸಿಎಂ, ವಿಶ್ವವಿಖ್ಯಾತ ಜಂಬೂ ಸವಾರಿ ಇಂದು ನಡೆಯಲಿದೆ. ಈಗಾಗಲೇ ನಂದಿ ಧ್ವಜ ಪೂಜೆ ನೆರವೇರಿದೆ. ಎಲ್ಲಾ ಪ್ರವಾಸಿಗರಿಗೆ ಸ್ವಾಗತ ಕೋರುತ್ತೇನೆ. ಸಿಎಂ ಆಗಿ 8 ಸಲ ದಸರಾಕ್ಕೆ ಬಂದಿದ್ದೇನೆ. ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ರಾಜ್ಯದ ಜನ ಎಲ್ಲರೂ ಖುಷಿಯಾಗಿದ್ದರೆ ಸರ್ಕಾರ ಸಹ ಸಂತೋಷ ವಾಗಿರುತ್ತದೆ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow